Monday, November 16, 2009

////ಏಕೆ ???///
-----------------------------------
ಅಂದುಕೊಂಡ ಕಟ್ಟಿ ಕೊಂಡ ಎಷ್ಟೋ ಕನಸುಗಳು ! ಏನಾದವು ?
ಕೆಲವೊಂದು ಅರ್ಥವಿಲ್ಲದು , ಕೆಲವು ಅರ್ಥವಾಗದೆ ಹೋದದ್ದು ?
ಮತ್ತೆ ಮತ್ತೆ ಕಾಡಿದ್ದು ಕೆಲವೊಂದು ನೆನಪು !
ದಿನಗಳಲಿ ಏನೆಲ್ಲಾ ಇದ್ದವು ! ಬದುಕು ಬಯಸಿದ್ದೆಲ್ಲ !
ದುಡ್ಡಿಲ್ಲದಿದ್ದರೆ ಏನಂತೆ ! ಪ್ರೀತಿಸುವ ಮನಸುಗಳಿದ್ದವು !
ಇಂದು ದುಡ್ಡಿದೆ ? ಆದರೆ ಕೊರತೆ ಪ್ರೀತಿಯದೆ !
ಅಂದು ಏನಿರಲಿಲ್ಲ ! ಪ್ರೀತಿಯಿತ್ತು ! ಈಗ ಎಲ್ಲವೂ ಇದೆ ! ಆದರೆ ಬೇಕಾದ್ದೇ ಇಲ್ಲ !
ನಂಬಿಕೆ , ಪ್ರೀತಿ , ವಿಶ್ವಾಸ ! ಅಪರಿಚಿತ ಪದಗಳಾಗಿವೆ ನಮಗೆ !
ಏಕೆ ? ಹೀಗೆ ? ನಾವಿರುವುದೇ ಹೀಗೆಯೋ ? ಅಥವಾ ಪ್ರಪಂಚವೋ ?
ಅರಿಯಲಾಗುತಿಲ್ಲ ! ಅರಿತುಕೊಳ್ಳಲು ಆಗುತ್ತಿಲ್ಲ !
ಒಂದು ಕ್ಷಣ , ಕಣ್ಮುಚ್ಚಿ ನೋಡಿ !
ಬರೀ ಕತ್ತಲು ! ಒಂಥರಾ ಶೂನ್ಯ ! ಅಲ್ಲವೇ ?
ಹಾಗೆಯೆ ಪ್ರೀತಿ , ವಿಶ್ವಾಸವಿಲ್ಲದ ಬದುಕು ಕೂಡ !
ಅಪರಿಚಿತರ ನಂಬುತ್ತೇವೆ ! ಪರಿಚಿತರ ದೂರುತ್ತೇವೆ !
ನಂಬಿದವರು ನಮಗೆ ಮೋಸ ಮಾಡುತ್ತಾರೆ ! ನಾವು ನಮ್ಮ ನಂಬಿದವರಿಗೆ !
ಏಕೆ ? ಇಷ್ಟೇನಾ ಜೀವನ ? ಇಷ್ಟೇನಾ ಬದುಕು ?
ಯೋಚಿಸೋಣ ! ಎಲ್ಲಕ್ಕೋ ಮಿಗಿಲಾದ ಬದುಕೊಂದಿದೆ ಎಂದು !
ಸ್ನೇಹ ವಿಶ್ವಾಸಗಳ ಹೊಸ ಬದುಕಿದೆಯೆಂದು !
ನೋಡಿ ಕೊಳ್ಳುವ ಬರದ ಹಾಗೆಯೇ ಅಪಸ್ವರ !
ಅಲ್ಲೂ ಏಕೆ ? ಹೊಂದಿಕೊಳ್ಳಲು ಅವಸರ !

//////////ಭಾವನೆ////
------------------------------------
ಮೀಟಲು ಆಗುವುದಿಲ್ಲ ! ಕಲ್ಲಿನ ವೀಣೆಯನು !
ಅರಿಯಲು ಸಾದ್ಯವಿಲ್ಲ ! ಮನಸಿನ ಭಾವನೆಯನು !
ಕಂಡು ಹಿಡಿಯಲು ಆಗುವುದಿಲ್ಲ ! ಮೀನಿನ ಹೆಜ್ಜೆಯನು !
ಹಾಗೆಯೆ ! ಅನುಭವಿಸಬೇಕು ! ಸ್ನೇಹದ ! ಆನಂದವನು !
ವರ್ಣಿಸಲು ಸಾದ್ಯವಿಲ್ಲ ! ಸ್ನೇಹವೆಂದರೆ ಏನೆಂದು !
ಅನುಭವಿಸಬೇಕು ! ಆನಂದಿಸಬೇಕು ! ಕೇಳಬೇಡ ಏಕೆಂದು !
ಕಾಣದ ದೇವರ ನೆನೆದು ! ಅವನ ದಯೆ ಕೋರುವ ಜನ ನಾವು !
ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು !
ಭಾವಿಸುವುದಿಲ್ಲ ಏಕೆ ! ಸ್ನೇಹ ಒಂದು ಮದುರ ಸಂಬಂದವೆಂದು !
ಕಟ್ಟುವಿರೆಕೆ ! ಅದಕೂ ! ಸಲ್ಲದ ಕಥೆಗಳನು !
ಬದುಕು ಅಂದರೆ ! ಏನೆಂದು ! ಅರಿಯಬೇಕಿದೆ ನಾವಿಂದು !
ನಗಿಸಲು ಸಾದ್ಯವದಿದ್ದರೂ ಚಿಂತೆಯಿಲ್ಲ ! ಆದರೆ ಸುಮ್ಮನೆ ಅಳಿಸಬೇಡಿ !
ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ! ಆದರೆ ಸುರಿಯುವ ಹಾಗೆ ಮಾಡಬೇಡಿ !
ನಿಮಗೆ ಸ್ನೇಹದಲಿ ನಂಬಿಕೆ ಇರದಿದ್ದರೆ ಚಿಂತೆಯಿಲ್ಲ !
ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ !
ಜಗದಲಿ ! ಕಣ್ಣಿಲ್ಲದ್ದವರಿಗಿಂತ ! ಕಣ್ಮುಚ್ಚಿ ಕುಳಿತವರೇ ಹೆಚ್ಚ್ಚು !
ಕನಸು ಕಾಣುವವರಿಗಿಂತ ! ಕನಸು ಕಳೆದು ಕೊಂಡ ವರೇ ಹೆಚ್ಚು !
ಸ್ನೇಹದ ಲೋಕದಲಿ ಸ್ನೇಹದ ಬೆಲೆ ಎಂದಿಗೂ ಹೆಚ್ಚು !

ಏನಾಗಿದೆ ! ಏನೋ ! ನಾ ! ಅರಿಯೆ !
ಕಣ್ಣ ತುಂಬಿ ಕೊಂಡಿದೆ ! ನಾನಾ ರೀತಿಯ ಮಾಯೆ !
ಅರ್ಥವಿಲ್ಲದ ಜೀವನ ! ಗುರಿಯಿಲ್ಲದ ಪಯಣ !
ಬದುಕು ಎಲ್ಲಿಗೆ ಕರೆದೊಯುವುದೋ ಅಲ್ಲಿಯವರೆಗೆ !
ಸ್ನೇಹ ಸಂಬಂದಗಳು ನಂಬಿಕೆ ಉಳಿಸಿ ಕೊಳ್ಳುವವರೆಗೆ !
ಪ್ರೀತಿ ಪ್ರೇಮಗಳು ! ಭ್ರಮೆ ಕಳಚಿ ಕೊಳ್ಳುವವರೆಗೆ !
ವಾಸ್ತವ ! ನಮಗೆ ಬೇಕಿಲ್ಲ ! ಭ್ರಮೆಯಲೇ !ಬದುಕು ಸಾಗುತಿದೆಯಲ್ಲ !
ನಿರ್ಮಲ ಸ್ನೇಹವನೆ ಪ್ರಶ್ನಿಸುವರಲ್ಲ !
ಮೋಸ ಮಾಡುವ ಪ್ರೀತಿಯ ! ನಂಬುವ ರೆಲ್ಲ !
ಒಬ್ಬರ ಮೆಲೋಬ್ಬರಿಗೆ ನಂಬಿಕೆ ಇಲ್ಲ ! ಸುಮ್ಮನೆ ಅನುಮಾನಿಸುವರಲ್ಲ !
ಬದುಕು ಅಂದರೆ ಇಷ್ಟೇನಾ ? ಅಥವಾ ನಮ್ಮ ನಂಬಿಕೆ ಸುಳ್ಳೇನಾ ?
ವಂಚಿಸುವವರ ನಂಬುವುದಕಿಂತ , ನಂಬಿದವರ ನಂಬಿಕೆ ಉಳಿಸಿಕೊಳ್ಳುವುದೇ ಮೇಲು !
ಬದುಕು ! ಗೊತ್ತು ! ನೋವು , ನಲಿವು, ಸುಖ , ದುಃಖ ಗಳ ! ಗೊಂಚಲು !
ಆದರೆ ಸ್ನೇಹವ ನಂಬಲು ! ಏತಕೆ ಇಲ್ಲದ ಕರಾರು !
ಬದುಕು ಇರುವುದೇ ಹೀಗೆ ! ಅದರಲಿ ಬದುಕುವ ಬಗೆ !
ಅರಿಯದಿದ್ದರೆ ಹೇಗೆ ! ?.

ಎಷ್ಟೇ ತಪ್ಪುಗಳಿದ್ದರು! ಎಷ್ಟೇ ಕೋಪ ವಿದ್ದರು !
ಏನೇ ಕೆಲಸವಿದ್ದರೂ ! ಮರೆಯ ಬೇಡ ಗೆಳತಿ !
ಸ್ನೇಹದ ರೀತಿ ! ಅದು ಹೂ ಬಳ್ಳಿಯ ರೀತಿ !
ಹಬ್ಬಿಸಿದಷ್ಟು ದಟ್ಟವಾಗಿ ಹರಡುವುದು !
ಬೆಳೆಸಿದಷ್ಟು ಹುಲುಸಾಗಿ ಬೆಳೆಯುವುದು !
ಅದು ನೀ ಸ್ವೀಕರಿಸಿದ ರೀತಿ !
ಹರಿವ ನದಿಯ ನೀರಿನಂತೆ ! ಶುಭ್ರ ಆಗಸದ ನೀಲಿಯಂತೆ !
ಮುಗ್ದ ಮನಸಿನ ಮಗುವಿನ ನಗೆಯಂತೆ !
ಸಿಹಿ ನೀರ ಹನಿಯಂತೆ !
ಸ್ನೇಹ ಅಮೃತವಂತೆ !ಅದು ನಿಜವೇನೆ ಗೆಳತಿ ?

1 comment:

  1. ಸ್ನೇಹದ ರೀತಿಯನ್ನು ಸೊಗಸಾಗಿ ವರ್ಣಿಸಿದ್ದೀರಿ. ಅಭಿನಂದನೆಗಳು.

    ReplyDelete