Wednesday, October 21, 2009

ಇನ್ನೊಂದು ಕವನಗಳು

ಬದುಕ ನಡೆಸಲು ಆಡಬೇಕು ನೂರಾರು ಆಟ !
ಬದುಕು ಎಂಬುದು ಮಾಯೆಯ ಆಟ !
ನೂರಾರು ಪ್ರಶ್ನೆಗಳು , ಕೆಲವಕ್ಕೆ ಮಾತ್ರ ಉತ್ತರ !
ನೂರಾರು ಮನಸುಗಳು , ಕೆಲವಕ್ಕೆ ಮಾತ್ರ ಪ್ರೀತಿ !
ಎಷ್ಟೋ ಕನಸುಗಳು ಹೇಳಲು ಮನಕೆ ಬೀತಿ !
ಹೇಳಲು ಆಗುವುದಿಲ್ಲ ಕೆಲವೊಂದು ನುಡಿ !
ಬದುಕ ಕರೆದ ಕಡೆ ಬಂಡಿಯ ಬಿಡಿ !
ಸ್ವಾರ್ಥದಲಿ ಪ್ರೀತಿಯ ಬದುಕು ಅರಳುವುದಿಲ್ಲ !
ಪ್ರೀತಿಸಿದ ಎಲ್ಲರಿಗು ಪ್ರೀತಿ ದೊರೆಯುವುದಿಲ್ಲ !
ಮನ ಕಂಡ ಕನಸು ನನಸಾಗಲು ಹಾತೊರೆಯುತ್ತದೆಯಲ್ಲ !
ಬರೆದ ಎಲ್ಲ ನುಡಿಗಳು ಕವನಗಳಾಗುವುದಿಲ್ಲ !
ನಾ ಬರೆದ ನುಡಿಗಳಲಿ ಅರ್ಥವಿರುವೊದೋ ಗೊತ್ತಿಲ್ಲ !
ಕಾಣದ ಬದುಕಿನ ಹಿಂದೆ ಬಿದ್ದಿರುವುದು ಸುಳ್ಳಲ್ಲ !
ನಂಬಿಕೆಯಿದೆ ! ಅಮಾವಾಸೆಯಲಿ ಕಾಣದೆ ಹೋದರು ಚಂದಿರ !
ಬಾಳ ಇರುಳಿನಲಿ ತಂಪೆರೆಯಲು ಮತ್ತೆ ಬರುವನು ಚಂದಿರ !


ಅರಿತು ನಡೆವ ಗೆಳತಿಯ/ಯನ ಗಳಿಸಿ ಕೊಡುವ ಹೃದಯ ನಾದ ಸ್ನೇಹ !
ಸ್ನೇಹವಲ್ಲ ಮೋಹ ! ಮೋಹವಲ್ಲ ಸ್ನೇಹ !
ಎರಡೂ ಒಂದಾದರೆ ಸ್ನೇಹದ ಹೆಸರಿಗೆ ದ್ರೋಹ !
ಮುಗ್ದ ಮನಸಿನ ಮಗುವಿನ ಮುಗುಳ್ನಗೆ ಸ್ನೇಹ !
ನೊರೆ ಹಾಲಿನಂತೆ ನಿರ್ಮಲ ಈ ಸ್ನೇಹ !
ಪ್ರಕೃತಿಯ ಹಸಿರಂತೆ !ಅದರ ಉಸಿರಂತೆ ಸ್ನೇಹ !
ಎಂದಿಗೂ ಬಗೆಯದಿರು ಅದಕೆ ದ್ರೋಹ !

2 comments:

  1. ತುಂಬ ಅರ್ಥಪೂರ್ಣವಾದ ಕವನ.
    (ಹಸಿರು ಹಿನ್ನೆಲೆಯ ಮೇಲೆ ನೀಲಿ ಅಕ್ಷರಗಳನ್ನು ಓದಲು ಕಷ್ಟವಾಗುತ್ತದೆ.
    ಹಿನ್ನೆಲೆ ಬದಲಿಸುವದು ಒಳ್ಳೆಯದೇನೋ.)

    ReplyDelete