Monday, August 17, 2009

ಹೊಸ ಪ್ರಪಂಚ.. ಹೊಂದಿಕೊಂಡಿರುವವರು ಎಷ್ಟು ಜನ?


ಬೋರಿಂಗ್ ವೀಕೆಂಡು,ಬೋರಿಂಗ್ ದಿನ,ನಿದ್ದೆ ಮಾಡೋಕೆ ಬೋರು, ಟಿವಿ ನೋಡೋಕೆ ಬೋರು,ಊಟ ಮಾಡೋಕೆ ಬೋರು,ಹೊರಗೆ ಹೋಗೋಕೆ ಬೋರು..ಇಡೀ ದಿನ ಹಾಸಿಗೆ ಮೇಲೆ ಉರುಳಾಡುತ್ತ ನಿದ್ದೆನೂ ಮಾಡದೆ, ಸುಮ್ನೆ ಸತ್ತ ಹೆಣ(??)ದ ತರಹ ಬಿದ್ಕೊಂಡಿರೋದು..ಟಿವಿ. ಆನ್ ಆಗೇ ಇರುತ್ತೆ.ನೋಡೊರು ಯಾರೋ??!! ಎಲ್ಲಾ ಬೋರು ಮಯ..

ಮನಸೆಲ್ಲಾ ಖಾಲಿ ಖಾಲಿ..ಏನೋ ಅಪೂರ್ಣತೆ..ಕಾರಣವಿಲ್ಲದೆ ಹರಿಯುವ ಕಣ್ಣೀರ ಕೋಡಿ.ಬಿಡುವಿಲ್ಲದೆ ಬರುವ ಫೋನ್ ಕಾಲ್ ಗಳು..ಆ ಶಬ್ಧದ ಹಿಂಸೆ ತಾಳಲಾರದೆ ಸ್ವಿಚ್ ಆಫ್ ಇಲ್ಲಾ ಸೈಲೆಂಟ್ ಮೋಡ್ ಗೆ ಹಾಕಿ ಬಿಡೋದು.ಯಾಕೋ ಯಾವುದರಲ್ಲೂ ಆಸಕ್ತಿ ಇಲ್ಲ.ಏನಾಗಿದೆ ಅನ್ನೋ ಪ್ರಶ್ನೆಗೆ ಉತ್ತರ ಯಾರಿಗೂ ತಿಳಿತಿಲ್ಲ.

ಆ ಕಾಲ...............
ಊರಲ್ಲಿ ಇಡೀ ವಟಾರದವರು ಅವರವರ ಮಕ್ಕಳಿಗೆ , ನಮ್ಮನ್ನ ಉದಾಹರಿಸಿ, "ನೋಡು , ಮಕ್ಕಳು ಅಂದ್ರೆ ಹೀಗಿರಬೇಕು" ಅನ್ನೋ ದಿನಗಳು. ಯಾವ ಚಟುವಟಿಕೆಯಲ್ಲಿ ಇಲ್ಲ ಅನ್ನೋ ಪ್ರಶ್ನೆಗೆ ಉತ್ತರನೇ ಇರುತ್ತಾ ಇರಲಿಲ್ಲ.ಓದೋದು, ಕುಣಿಯೋದು,ಚಿತ್ರಕಲೆ, ಆಟೋಟ,ರೌಡಿಸಂ(??). ನಗುತ್ತಿರುವದು
ಎಲ್ಲದರಲ್ಲೂನೂ ಒಂದು ಹೆಜ್ಜೆ ಮುಂದೆನೇ. ಸಂತೋಶದಿಂದ ನಮ್ಮ ಮನಸ್ಸು ತುಂಬಿ ಹೋಗೋದು."ರೀ ಮುತ್ತಿನಂಥಾ ಮಕ್ಕಳನ್ನ ಪಡೆದಿದ್ದೀರ" ಅಂತ ಬೇರೆಯವರು ಹೇಳಿದಾಕ್ಷಣ ಹೆತ್ತವರ ಮುಖದಲ್ಲಿ ಸಾರ್ಥಕತೆಯ ಬಿಂಬ.

ಈಗ ಬ್ಯಾಕ್ ಟು ಪೆವಿಲಿಯನ್....

ದೊಡ್ಡ ಊರು, ದೊಡ್ಡ ಕೆಲಸ,ದೊಡ್ಡ ಸಂಬಳ,ದೊಡ್ಡ ಜನ..ಎಲ್ಲಾನೂ ಅಂದುಕೊಂಡ ತರನೇ ಆಗಿದೆ.ಕಷ್ಟ ಪಟ್ಟು ಓದುತ್ತಾ ಇರಬೇಕಾದ್ರೆ ಕಂಡ ಕನಸುಗಳು ನಿಜವಾಗಿವೆ.ಪ್ರತಿಷ್ಟಿತ ಕಂಪನಿಯಲ್ಲಿ ಉದ್ಯೋಗ..ಒಳ್ಳೆ ರೆಪ್ಯುಟೇಶನ್.ಇನ್ನೇನು ಬೇಕು ಈ ಸಣ್ಣ ಜೀವಕ್ಕೆ?? ಆದರೆ ಬಾವಿಯಲ್ಲಿದ್ದ ಕಪ್ಪೆ ಸಮುದ್ರಕ್ಕೆ ಬಿದ್ದಾಗ ಏನಾಯ್ತು ಅದರ ಕಥೆ?

ನಾವುಗಳು ಕಾಣೋ ಕನಸನ್ನ ನನಸು ಮಾಡೋ ಪ್ರಯತ್ನದಲ್ಲಿ ನಮ್ಮ ತನವನ್ನ ನಾವು ಕಳ್ಕೋತಿವಿನೋ ಅನಿಸ್ತಾ ಇದೆ. ಏನನ್ನೂ ಸಾಧಿಸಲಾಗದ ವಿಪರ್ಯಾಸ.ಯಾರದ್ದೋ ಮುಷ್ಟಿಯಲ್ಲಿ ಬಂಧಿತರಾಗಿರುವಂತೆ ಸಾಗಿಸುವ ಜೀವನ. ಹೇಗೇಗೋ ಇದ್ದೋರು, ಹೇಗೋ ಆಗಿಬಿಡ್ತೀವಿ.ಈ ಓಟ ಎಷ್ಟು ದಿನ?ಎಲ್ಲರನ್ನೂ ಕಾಡುವ ಖಾಲಿತನ, ಅಪೂರ್ಣತೆಗೆ ಪೂರ್ಣ ವಿರಾಮ ಎಂದಿಗೆ?ಉತ್ತರ ನಮ್ಮಲ್ಲೇ ಇದೆ,ಕಾಲಕ್ಕೆ ತಕ್ಕಂತೆ ನಮ್ಮ ಜೀವನ ಅನ್ನುವವರು ಎಷ್ಟೋ ಮಂದಿ.ಆದರೆ ಅದನ್ನ ಕಾರ್ಯ ರೂಪಕ್ಕೆ ತಂದಿರೋರು ಎಷ್ಟು ಜನ? ಎಲ್ಲರೂ ನೆಮ್ಮದಿ , ಶಾಂತಿಯುತವಾದ ಜೀವನ ನಡೆಸೋಕ್ಕೆ ಇನ್ನೆಷ್ಟು ಸಹಸ್ರ ವರ್ಷಗಳು ಕಾಯಬೇಕೇನೋ!!!!!!

Wednesday, August 12, 2009

ನನ್ನ ಗೆಳತಿಗಾಗಿ...................

ನನ್ನ ಗೆಳತಿ
ಸ್ನೇಹದ ಕಾಣಿಕೆಯು ನೀನು
ನಿನ್ನ ನೆನಪಿನಲ್ಲಿ ಇರುವ
ಮಾಯೆಯಾದರು ಏನು ?
ನಿನ್ನ ನೆನೆದರೆ ಆಗುವ
ಮನಸ್ಸಿನ ಆನಂದದ ಕಾರಣವೇನು ?
ವರುಷಗಳೇ ಕಳೆದು ಹೋದರು
ನಿನ್ನ ನೆನಪಲ್ಲಿರುವ ಹರುಷಕ್ಕೆ ಕಾರಣವೇನು ?
ನಿನ್ನ ಒಮ್ಮೆಯಾದರು ನೋಡದಿದ್ದರೂ
ನನ್ನ ಮನಸ್ಸಲ್ಲಿ ನಿನ್ನ ನೋಡಲು ಕಾರಣವೇನು ?
ನನ್ನ ಗೆಳತಿ
ಸ್ನೇಹಕ್ಕೆ ಇಸ್ಟೊಂದು ಶಕ್ತಿ ಇರಲು ಕಾರಣವೇನು ?
ಅದೇನೇ ಇರಲಿ ಸದಾ ನಗುತಾ ಇರು ನೀನು.......
ಸ್ನೇಹಕೆ ನಿಜವಾಗಲೂ ಇಷ್ಟು ಶಕ್ತಿ ಇದ್ದರೆ
ನಿನ್ನ ಕಾಣುವ ದಿನವು ಎಂದು ಎಲ್ಲಿ ಹೇಗೆ ?
ನನ್ನ ಮನಸ್ಸಲ್ಲಿರುವ ಪ್ರಶ್ನೆಗಳಿಗೆ ಉತ್ತರವೇನು ?
ನನ್ನ ಸಕಿಯೇ
ಸ್ನೇಹದ ಕಾಣಿಕೆಯು ನೀನು
ನಿನ್ನ ನೆನಪಿನಲ್ಲಿ ಇರುವ
ಮಾಯೆಯಾದರು ಏನು ?
ಮನಸ್ಸಿನ ಆನಂದದ ಕಾರಣವೇನು ?
ನನ್ನ ಮನಸ್ಸಲ್ಲಿರುವ ಪ್ರಶ್ನೆಗಳಿಗೆ ಉತ್ತರವೇನು ?
ಅದೇನೇ ಇರಲಿ ಸದಾ ನಗುತಾ ಇರು ನೀನು.........
ನಿನ್ನ ಜೊತೆ ಮಾತನಾಡಿದರೆ
ಸವಿಜೇನು ಸವಿದಂತೆ ಆಗಲು ಕಾರಣವೇನು ?
ನಿನ್ನ ಜೀವನವು ಹಾಲುಜೇನಿನಂತೆ
ಸದಾ ಸಿಹಿಯಾಗಿರಲಿ ಎಂದು ಹರಸುವೆ .... ನಾನು.......................