Monday, August 17, 2009

ಹೊಸ ಪ್ರಪಂಚ.. ಹೊಂದಿಕೊಂಡಿರುವವರು ಎಷ್ಟು ಜನ?


ಬೋರಿಂಗ್ ವೀಕೆಂಡು,ಬೋರಿಂಗ್ ದಿನ,ನಿದ್ದೆ ಮಾಡೋಕೆ ಬೋರು, ಟಿವಿ ನೋಡೋಕೆ ಬೋರು,ಊಟ ಮಾಡೋಕೆ ಬೋರು,ಹೊರಗೆ ಹೋಗೋಕೆ ಬೋರು..ಇಡೀ ದಿನ ಹಾಸಿಗೆ ಮೇಲೆ ಉರುಳಾಡುತ್ತ ನಿದ್ದೆನೂ ಮಾಡದೆ, ಸುಮ್ನೆ ಸತ್ತ ಹೆಣ(??)ದ ತರಹ ಬಿದ್ಕೊಂಡಿರೋದು..ಟಿವಿ. ಆನ್ ಆಗೇ ಇರುತ್ತೆ.ನೋಡೊರು ಯಾರೋ??!! ಎಲ್ಲಾ ಬೋರು ಮಯ..

ಮನಸೆಲ್ಲಾ ಖಾಲಿ ಖಾಲಿ..ಏನೋ ಅಪೂರ್ಣತೆ..ಕಾರಣವಿಲ್ಲದೆ ಹರಿಯುವ ಕಣ್ಣೀರ ಕೋಡಿ.ಬಿಡುವಿಲ್ಲದೆ ಬರುವ ಫೋನ್ ಕಾಲ್ ಗಳು..ಆ ಶಬ್ಧದ ಹಿಂಸೆ ತಾಳಲಾರದೆ ಸ್ವಿಚ್ ಆಫ್ ಇಲ್ಲಾ ಸೈಲೆಂಟ್ ಮೋಡ್ ಗೆ ಹಾಕಿ ಬಿಡೋದು.ಯಾಕೋ ಯಾವುದರಲ್ಲೂ ಆಸಕ್ತಿ ಇಲ್ಲ.ಏನಾಗಿದೆ ಅನ್ನೋ ಪ್ರಶ್ನೆಗೆ ಉತ್ತರ ಯಾರಿಗೂ ತಿಳಿತಿಲ್ಲ.

ಆ ಕಾಲ...............
ಊರಲ್ಲಿ ಇಡೀ ವಟಾರದವರು ಅವರವರ ಮಕ್ಕಳಿಗೆ , ನಮ್ಮನ್ನ ಉದಾಹರಿಸಿ, "ನೋಡು , ಮಕ್ಕಳು ಅಂದ್ರೆ ಹೀಗಿರಬೇಕು" ಅನ್ನೋ ದಿನಗಳು. ಯಾವ ಚಟುವಟಿಕೆಯಲ್ಲಿ ಇಲ್ಲ ಅನ್ನೋ ಪ್ರಶ್ನೆಗೆ ಉತ್ತರನೇ ಇರುತ್ತಾ ಇರಲಿಲ್ಲ.ಓದೋದು, ಕುಣಿಯೋದು,ಚಿತ್ರಕಲೆ, ಆಟೋಟ,ರೌಡಿಸಂ(??). ನಗುತ್ತಿರುವದು
ಎಲ್ಲದರಲ್ಲೂನೂ ಒಂದು ಹೆಜ್ಜೆ ಮುಂದೆನೇ. ಸಂತೋಶದಿಂದ ನಮ್ಮ ಮನಸ್ಸು ತುಂಬಿ ಹೋಗೋದು."ರೀ ಮುತ್ತಿನಂಥಾ ಮಕ್ಕಳನ್ನ ಪಡೆದಿದ್ದೀರ" ಅಂತ ಬೇರೆಯವರು ಹೇಳಿದಾಕ್ಷಣ ಹೆತ್ತವರ ಮುಖದಲ್ಲಿ ಸಾರ್ಥಕತೆಯ ಬಿಂಬ.

ಈಗ ಬ್ಯಾಕ್ ಟು ಪೆವಿಲಿಯನ್....

ದೊಡ್ಡ ಊರು, ದೊಡ್ಡ ಕೆಲಸ,ದೊಡ್ಡ ಸಂಬಳ,ದೊಡ್ಡ ಜನ..ಎಲ್ಲಾನೂ ಅಂದುಕೊಂಡ ತರನೇ ಆಗಿದೆ.ಕಷ್ಟ ಪಟ್ಟು ಓದುತ್ತಾ ಇರಬೇಕಾದ್ರೆ ಕಂಡ ಕನಸುಗಳು ನಿಜವಾಗಿವೆ.ಪ್ರತಿಷ್ಟಿತ ಕಂಪನಿಯಲ್ಲಿ ಉದ್ಯೋಗ..ಒಳ್ಳೆ ರೆಪ್ಯುಟೇಶನ್.ಇನ್ನೇನು ಬೇಕು ಈ ಸಣ್ಣ ಜೀವಕ್ಕೆ?? ಆದರೆ ಬಾವಿಯಲ್ಲಿದ್ದ ಕಪ್ಪೆ ಸಮುದ್ರಕ್ಕೆ ಬಿದ್ದಾಗ ಏನಾಯ್ತು ಅದರ ಕಥೆ?

ನಾವುಗಳು ಕಾಣೋ ಕನಸನ್ನ ನನಸು ಮಾಡೋ ಪ್ರಯತ್ನದಲ್ಲಿ ನಮ್ಮ ತನವನ್ನ ನಾವು ಕಳ್ಕೋತಿವಿನೋ ಅನಿಸ್ತಾ ಇದೆ. ಏನನ್ನೂ ಸಾಧಿಸಲಾಗದ ವಿಪರ್ಯಾಸ.ಯಾರದ್ದೋ ಮುಷ್ಟಿಯಲ್ಲಿ ಬಂಧಿತರಾಗಿರುವಂತೆ ಸಾಗಿಸುವ ಜೀವನ. ಹೇಗೇಗೋ ಇದ್ದೋರು, ಹೇಗೋ ಆಗಿಬಿಡ್ತೀವಿ.ಈ ಓಟ ಎಷ್ಟು ದಿನ?ಎಲ್ಲರನ್ನೂ ಕಾಡುವ ಖಾಲಿತನ, ಅಪೂರ್ಣತೆಗೆ ಪೂರ್ಣ ವಿರಾಮ ಎಂದಿಗೆ?ಉತ್ತರ ನಮ್ಮಲ್ಲೇ ಇದೆ,ಕಾಲಕ್ಕೆ ತಕ್ಕಂತೆ ನಮ್ಮ ಜೀವನ ಅನ್ನುವವರು ಎಷ್ಟೋ ಮಂದಿ.ಆದರೆ ಅದನ್ನ ಕಾರ್ಯ ರೂಪಕ್ಕೆ ತಂದಿರೋರು ಎಷ್ಟು ಜನ? ಎಲ್ಲರೂ ನೆಮ್ಮದಿ , ಶಾಂತಿಯುತವಾದ ಜೀವನ ನಡೆಸೋಕ್ಕೆ ಇನ್ನೆಷ್ಟು ಸಹಸ್ರ ವರ್ಷಗಳು ಕಾಯಬೇಕೇನೋ!!!!!!

4 comments:

  1. ನಾಗೇಶ,
    ನೀವು ಹೇಳೋದು ಶತಶಃ ಸರಿಯಾಗಿದೆ. ಸಣ್ಣ ಊರುಗಳಲ್ಲಿ ನಮ್ಮನ್ನು ಗುರುತಿಸೋರು ಇರ್ತಾರೆ. ದೊಡ್ಡ ನಗರಗಳಲ್ಲಿ ನಮ್ಮ identity ಹೋಗಿ ಬಿಡುತ್ತದೆ. ನಾವು faceless ಆಗಿಬಿಡ್ತೀವಿ.

    ReplyDelete
  2. ನಾಗೇಶ್ ಆಚಾರ್ ಅವರೇ,
    ಲೇಖನ ಅರ್ಥಪೂರ್ಣವಾಗಿದೆ, ಇಂದಿನ ದಿನಗಳಲ್ಲಿ ಮನುಷ್ಯ-ಮನುಷ್ಯನ ನಡುವಿನ ಸಂಭಂಧಗಳು ಮಾಸಿಹೊಗುತ್ತಿವೆ, ಪ್ರತಿಯೊಬ್ಬರೂ ಊಹಿಸಲಾರದಷ್ಟು ಸ್ವಾರ್ಥಿಗಳಾಗುತ್ತಿದ್ದಾರೆ ಅಲ್ಲವೇ..... ?

    ReplyDelete
  3. ಲೇಖನ ತುಂಬಾ ಅರ್ಥಪುರ್ಣವಾಗಿದೆ..... ಸಣ್ಣ ಸಣ್ಣ ಊರಿನಲ್ಲಿ ನಮ್ಮ ಹೆಸರು ಹೇಳಿದರೆ ಸಾಕು ನಮ್ಮನ್ನ ಗುರುತು ಹಿಡಿಯುತ್ತಾರೆ..... ದೊಡ್ಡ ಊರಿನಲ್ಲಿ ಡೋರ್ ನಂಬರ್ ಗಲ್ಲಿ ನಂಬರ್ ಹೇಳಿದ್ರು ಗೊತ್ತಾಗಲ್ಲ.... ನಮ್ಮ ಮುಖವನ್ನ ಯಾರೂ ಗುರುತು ಹಿಡಿಯಲ್ಲ ಅಂತ ನಮ್ಮ ಮುಖದ ಗುರುತು ನಮಗೆ ಮರೆತು ಹೋಗಿರತ್ತೆ ಆಲ್ವಾ....

    ReplyDelete
  4. ಭಾನುವಾರ ಬಂತು...ಪ್ರಭುಲೀಲಾ ಪ್ರಸಂಗ ಏನು ಬರುತ್ತೋ ನಿರೀಕ್ಷೆಯಲ್ಲಿದ್ದೇನೆ...ಬರ್ತೇನೆ ಮತ್ತೆ...
    ನಾಗೇಶ್, ಪ್ರಭು ಮೂಲಕ ನಿಮ್ಮ ಗೂಡಿಗೆ ಪ್ರವೇಶ. ನನ್ನನ್ನು ಬಹಳವಾಗಿ ಪ್ರಭಾವಕ್ಕೀಡುಮಾಡಿದ್ದು ನಿಮ್ಮ ನಮ್ಮೆಲ್ಲರ ಅರಮನೆ ನಗರಿ, ಮೈಸೂರು. ಅಂತಹ ಕಡೆ ಇದ್ದು ನಿಮಗೆ ಎಲ್ಲ ಏಕೆ ಬೋರ್..?? ಆದ್ರೂ ನಿಜ ಕೆಲವೊಮ್ಮೆ ಅನ್ನಿಸಬಹುದು...
    ನನ್ನ ಬ್ಳಾಗಿಗೆ ಬನ್ನಿ....
    ದಸರೆಯ ಶುಭಾಷಯಗಳು

    ReplyDelete