Monday, April 20, 2009


ಶಕುಂತಲೆ.............

ಬಹಳ ದಿನಗಳ ಬಳಿಕ ಶಕುಂತಲೆಯ

ನೆನಪಾದ ದುಶ್ಯಂತ ಕಾಡಿಗೆ ಹೋದ

ಅಲ್ಲೇ ಆತ ಬಿಟ್ಟು ಹೋದಲ್ಲೆ ಅದೇ

ಆಶ್ರಮದಂಗಳದಲ್ಲೆ ಕುಳಿತಿದ್ದಳು ಆಕೆ...

ಬಳಿಸಾರಿ ಕಣ್ಣಲ್ಲಿ ಕಣ್ಣಿಟ್ಟು ನೋಡಹೊರಟನಾತ

ಆಕೆಯ ಕಣ್ಣಲ್ಲಿ ಅವನಿಗೆ ಕಂಡಿದ್ದು

ಅವಳಲ್ಲ...

ಸತ್ತ ಶಾಕುಂತಲೆ ಮತ್ತು ಶೂನ್ಯ


3 comments:

  1. ನಾಗೇಶ್...

    ಕಾದು.. ಕಾದು
    ಶಾಕುಂತಲೆ..
    ತನ್ನಿನಿಯನ..ಬರುವೆಕೆಯಲ್ಲಿ..
    ಕುಳಿತಲ್ಲೇ ಕಲ್ಲಾಗಿದ್ದಳು...
    ಭಾವಗಳಿಲ್ಲದೆ..
    ಶೂನ್ಯವಾಗಿ...

    ನಿಮ್ಮ ಚಂದದ ಕವನಕ್ಕೆ
    ನನ್ನ ಪದಗಳಿಂದ
    ಅಭಿನಂದನೆಗಳು....

    ReplyDelete
  2. ಕವನ ಹೃದ್ಯವಾಗಿದೆ, ನಾಗೇಶ.
    ಇಲ್ಲಿರುವ ಚಿತ್ರ ರವಿವರ್ಮರದೆ?

    ReplyDelete
  3. ಹೌದು ಅದು ರವಿವರ್ಮನದೆ ಚಿತ್ರ

    ReplyDelete