Wednesday, August 12, 2009

ನನ್ನ ಗೆಳತಿಗಾಗಿ...................

ನನ್ನ ಗೆಳತಿ
ಸ್ನೇಹದ ಕಾಣಿಕೆಯು ನೀನು
ನಿನ್ನ ನೆನಪಿನಲ್ಲಿ ಇರುವ
ಮಾಯೆಯಾದರು ಏನು ?
ನಿನ್ನ ನೆನೆದರೆ ಆಗುವ
ಮನಸ್ಸಿನ ಆನಂದದ ಕಾರಣವೇನು ?
ವರುಷಗಳೇ ಕಳೆದು ಹೋದರು
ನಿನ್ನ ನೆನಪಲ್ಲಿರುವ ಹರುಷಕ್ಕೆ ಕಾರಣವೇನು ?
ನಿನ್ನ ಒಮ್ಮೆಯಾದರು ನೋಡದಿದ್ದರೂ
ನನ್ನ ಮನಸ್ಸಲ್ಲಿ ನಿನ್ನ ನೋಡಲು ಕಾರಣವೇನು ?
ನನ್ನ ಗೆಳತಿ
ಸ್ನೇಹಕ್ಕೆ ಇಸ್ಟೊಂದು ಶಕ್ತಿ ಇರಲು ಕಾರಣವೇನು ?
ಅದೇನೇ ಇರಲಿ ಸದಾ ನಗುತಾ ಇರು ನೀನು.......
ಸ್ನೇಹಕೆ ನಿಜವಾಗಲೂ ಇಷ್ಟು ಶಕ್ತಿ ಇದ್ದರೆ
ನಿನ್ನ ಕಾಣುವ ದಿನವು ಎಂದು ಎಲ್ಲಿ ಹೇಗೆ ?
ನನ್ನ ಮನಸ್ಸಲ್ಲಿರುವ ಪ್ರಶ್ನೆಗಳಿಗೆ ಉತ್ತರವೇನು ?
ನನ್ನ ಸಕಿಯೇ
ಸ್ನೇಹದ ಕಾಣಿಕೆಯು ನೀನು
ನಿನ್ನ ನೆನಪಿನಲ್ಲಿ ಇರುವ
ಮಾಯೆಯಾದರು ಏನು ?
ಮನಸ್ಸಿನ ಆನಂದದ ಕಾರಣವೇನು ?
ನನ್ನ ಮನಸ್ಸಲ್ಲಿರುವ ಪ್ರಶ್ನೆಗಳಿಗೆ ಉತ್ತರವೇನು ?
ಅದೇನೇ ಇರಲಿ ಸದಾ ನಗುತಾ ಇರು ನೀನು.........
ನಿನ್ನ ಜೊತೆ ಮಾತನಾಡಿದರೆ
ಸವಿಜೇನು ಸವಿದಂತೆ ಆಗಲು ಕಾರಣವೇನು ?
ನಿನ್ನ ಜೀವನವು ಹಾಲುಜೇನಿನಂತೆ
ಸದಾ ಸಿಹಿಯಾಗಿರಲಿ ಎಂದು ಹರಸುವೆ .... ನಾನು.......................

Tuesday, May 26, 2009

ಹೌದು, ಅಂದೂ ಕೂಡ ಹೀಗೆ ಮಳೆ ಇತ್ತು. ಎಲ್ಲಾ ನೆನಪಿದೆ. ಅಂದೂ ಮೇ ತಿಂಗಳು. ಇದೇ ರೀತಿ ಸಂಜೆಗೆ ಮೊದಲೇ ಕತ್ತಲಾಗಿ, ಮೋಡಗಳು ಆಕಾಶವನ್ನೆಲ್ಲಾ ಆಚ್ಛಾದಿಸಿ ಮಳೆ ಯಾವಾಗಲಾದರೂ ಬರಬಹುದು ಎನ್ನುವ ಸಮಯದಲ್ಲೇ ಅವಳ ಕರೆ ಬಂದಿದ್ದು.

"ಕಾಲೇಜ್ ಬಳಿ ಇರೋ ಮೈದಾನಕ್ಕೆ ಬಾ. ಸ್ವಲ್ಪ ಮಾತಾಡೋದಿದೆ."

ನಾನು ಫೋನ್ ಹಿಡಿದುಕೊಂಡೇ ಕಿಟಕಿಯಿಂದ ಹೊರಗಿಣುಕಿ "ಮಳೆ ಬರೊ ಹಾಗಿದೆಯಲ್ಲೇ, ಸಂಜೆ ಸಿಕ್ಕಿದ್ರೆ ಆಗಲ್ವ" ಎಂದೆ.

"ಇಲ್ಲ, ಸ್ವಲ್ಪ ಅರ್ಜೇ೦ಟು, ಈಗಲೇ ಬಾ" ಎಂದಳು.

ಅವಳ ಮಾತುಗಳು ಎಂದಿನ ಹಾಗಿರಲಿಲ್ಲ. ಯಾವಾಗಲೂ ಮಾತಿನ ಕೊನೆಗೆ ಸೇರಿಸುತ್ತಿದ್ದ "ಕಣೊ" "ಬಾರೋ" "ಹೇಳೊ" ಗಳು ಇಂದು ಮಾಯವಾಗಿದ್ದನ್ನು ನಾನು ಗಮನಿಸದೆ ಇರಲಿಲ್ಲ. ಆದರೂ ಅವಳು ಕೆಲವೊಮ್ಮೆ ಚಿಕ್ಕ ವಿಷಯವನ್ನೂ ಗಂಭೀರವಾಗಿಸಿಕೊಂಡು ಹೀಗೆ ಮಾತಾಡುವುದು ಇದ್ದೇ ಇದೆ.

ನಾನು ಅಂಗಳಕ್ಕೆ ಹೋಗಿ ಇನ್ನೊಮ್ಮೆ ಆಗಸದತ್ತ ದೃಷ್ಟಿಸಿದೆ. ಇಂದು ಮತ್ತೆ ಮಳೆ ಬರುವುದು ಗ್ಯಾರೆಂಟಿ ಎಂದೆಣಿಸಿ ಉಲ್ಲಸಿತನಾದೆ. ಈಗ ಮೊರ್ನಾಲ್ಕು ದಿನಗಳಿಂದ ಸಂಜೆ ಮಳೆ ಬೀಳುತ್ತಿತ್ತು. ಅದೂ "ಹಳೆಮಳೆ" ಅಂದ್ರೆ ನನಗೆ ಇನ್ನೂ ಸಂತೋಷ. "ಭಾನುವಾರನೂ ಬಿಡೋದಿಲ್ಲ ಈ ಮಳೆ" ಅಂತ ಅಮ್ಮ ಬರಲಿರುವ ವರುಣನನ್ನು ಶಪಿಸಿದಳು. ಶಾರದಾಂಬ ದೇವಸ್ಥಾನದ ಭಜನೆ ಎಲ್ಲಿ ತಪ್ಪಿ ಹೋಗುವುದೋ ಎಂದು ಅಮ್ಮನಿಗೆ ಆತಂಕವಾಗಿತ್ತು. ಸರಸರನೆ ಪ್ಯಾಂಟ್ ಏರಿಸುತ್ತಿದ್ದ ನನ್ನನ್ನು ನೋಡಿದ ಅಮ್ಮ "ಈಗ ಎಲ್ಲಿಗೋ? ಆಕಾಶ ನೋಡು ಸಗಣಿ ಬಳಿದಂತೆ ಕಪ್ಪಾಗಿದೆ, ಮಳೆ ಬರುತ್ತೆ. ಎಲ್ಲಿಗೂ ಹೋಗಬೇಡ" ಅಂದರು. ಅಮ್ಮನಿಗೆ ಮಳೆಯ ಮೇಲಿನ ಹುಸಿ ಕೋಪ ಅವಳ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. "ಫ್ರೆಂಡ್ ಮನೆಗೆ, ಸ್ವಲ್ಪ ಹೊತ್ತಿನಲ್ಲೇ ಬಂದು ಬಿಡುತ್ತೇನೆ " ಎಂದು ಹೇಳಿ ಅಮ್ಮನ ಪ್ರತಿಕ್ರಿಯೆಗೂ ಕಾಯದೆ ಮನೆಯಿಂದ ಹೊರಬಿದ್ದೆ.

ಗಾಳಿ ಜೋರಾಗಿ ಬೀಸುತ್ತಲಿತ್ತು. ಗಾಳಿಯ ವೇಗಕ್ಕೆ ರಸ್ತೆಯ ಕಸ, ಧೂಳೆಲ್ಲ ಮಿಶ್ರಗೊಂಡು ಆಕಾಶದಲ್ಲಿ ಹಾರಾಡುತ್ತಿದ್ದವು. ಜನರೆಲ್ಲ ಮನೆ ಸೇರಿಕೊಳ್ಳುವ ತವಕದಲ್ಲಿದ್ದರು. "ಛೆ, ಇವತ್ತು ತಲೆ ಸ್ನಾನ ಮಾಡಿದ್ದೆ ದಂಡ" ಎಂದು ನನ್ನಷ್ಟಕ್ಕೆ ಅಂದುಕೊಂಡೆ. ಮಳೆ ಬರೋದ್ರೊಳಗೆ ಕಾಲೇಜ್ ತಲುಪಬೇಕೆಂದು ವೇಗವಾಗಿ ಹೆಜ್ಜೆ ಹಾಕತೊಡಗಿದೆ. ಹೆಚ್ಚೂ ಕಡಿಮೆ ಓಡಿದಂತೆ ನಡೆದು ಮೈದಾನಕ್ಕೆ ಹತ್ತಿರಗೊಂಡೆ. ಮೈದಾನದ ಇನ್ನೊಂದು ತುದಿಯಲ್ಲಿ ಭೂತಾಕಾರವಾಗಿ ಬೆಳೆದಿದ್ದ ಸಂಪಿಗೆ ಮರದ ಬುಡದಲ್ಲಿ ಅವಳು ನಿಂತಿದ್ದಳು. ಸಂಪಿಗೆ ಮರ ಗಾಳಿಗೆ ತೂರಾಡುತ್ತ ಇನ್ನಷ್ಟು ಭಯಾನಕವಾಗಿ ತೋರುತ್ತಿತ್ತು. ಇವಳಿಗೆ ಅರ್ಥನೇ ಆಗಲ್ಲ, ಗಾಳಿ ಈ ರೀತಿ ಬೀಸುತ್ತಿದೆ, ಮರದ ಕೆಳಗೆ ನಿಂತಿದ್ದಾಳೆ ಎಂದು ಗದರಿಸಲು ಸಜ್ಜಾಗುತ್ತಾ ಅವಳತ್ತ ಧಾವಿಸಿದೆ. "ಏನೇ ಇಷ್ಟೊತ್ತಲ್ಲಿ ಬರ ಹೇಳಿದೆ, ಅದೂ ಅರ್ಜೆ೦ಟ್ ಅಂಥ" ಎಂದಿನಂತೆ ಮಾತಾಡಿದೆ. ಉತ್ತರ ಬರಲಿಲ್ಲ. ಅವಳು ನೆಲವನ್ನೆ ದಿಟ್ಟಿಸುತ್ತಿದ್ದಳು. ಏನೋ ಹೇಳೊಕೆ ಹೊರಟವನು ಸಂಪಿಗೆ ಮರದ ಹೊಯ್ದಾಟದಿಂದ ಭಯಗೊಂಡು "ನಡಿ ಇಲ್ಲಿ ನಿಲ್ಲುವುದು ಬೇಡ, ಕಾಲೇಜ್ ಬಳಿ ಹೋಗೋಣ" ಎಂದೆ. ನಾವು ಮರೆಯಿಂದ ಹೊರ ಬಂದಿದ್ದೇ ತಡ, ನೆಲ್ಲಿಕಾಯಿ ಗಾತ್ರದ ಮಳೆ ಹನಿಗಳು ಒಂದೊಂದಾಗೆ ಭೂಮಿಯ ಕಡೆಗೆ ಶರವೇಗದಲ್ಲಿ ಬೀಳತೊಡಗಿದವು. "ಓಡು ಓಡು, ಈ ಮಳೆಗೆ ತಲೆ ಕೊಟ್ರೆ ತಲೇನೆ ತೂತಾಗೋ ಚಾನ್ಸ್ ಇದೆ" ಎನ್ನುತ್ತ ಕಾಲೇಜ್ ಕಡೆಗೆ ಓಡತೊಡಗಿದೆ. ಅವಳು ದುಪಟ್ಟ ತಲೆಗೇರಿಸಿಕೊಂಡು ನನ್ನನ್ನು ಹಿಂಬಾಲಿಸತೊಡಗಿದಳು. ಹಂಚಿನ ಮಾಡಿಯ ಮೇಲೆ ಬೀಳುತ್ತಿದ್ದ ಮಳೆ ಹನಿಗಳ ಶಬ್ದ ಕಲ್ಲುಗಳು ಬಿದ್ದಂತೆ ಭಾಸವಾಗುತ್ತಿತ್ತು.

"ಏನೊ ಹೇಳ್ಬೇಕು ಅಂದ್ಯಲ್ಲ, ಈಗ ಹೇಳು, ಏನಂಥ ಸೀರಿಯಸ್ ವಿಷಯ ?"
"........................................."
"ಏನು ಹೇಳ್ತಿಯೊ ಇಲ್ವೊ? "
"........................................ ಏನೂ ಇಲ್ಲ."
"ಅರೆ ಇದೊಳ್ಳೆ ಕಥೆ ಆಯ್ತಲ್ಲ. ಏನೂ ಇಲ್ದೆ ಮತ್ತೇಕೆ ಕರೆದೆ. ಅಕ್ಷಯ್ ಕುಮಾರ್-ರವೀನಾ ತರ ಮಳೇಲಿ ಡ್ಯೂಯೆಟ್ ಹಾಡ್ಬೇಕು ಅನ್ನಿಸ್ತೇನೆ?" ಅಣಕವಾಡಿದೆ.

ಮಳೆ ಜೋರಾಯಿತು. ಮೈದಾನದಲ್ಲೆಲ್ಲ ತಿಳಿ ಬಿಳಿಯ ಪರದೆಯನ್ನು ಬಿಟ್ಟಂತೆ ಕಂಡುಬಂತು. ನನ್ನ ಮೆಚ್ಚಿನ ಮಳೆಯನ್ನು ನೋಡುತ್ತ ಕ್ಷಣಾರ್ಧದಲ್ಲೆ ಜಗವನ್ನು ಮರೆತು ಮಳೆಯ ಪ್ರಲಾಪದಲ್ಲಿ ಲೀನಗೊಂಡೆ. ಮಳೆ ಒಂದೇ ಸಮನೆ ಹೆಚ್ಚಾಗತೊಡಗಿತು. ಗಾಳಿ ಮೊದಲಿನಷ್ಟು ಇರಲಿಲ್ಲ. ನೋಡನೋಡುತ್ತಿದ್ದಂತೆ ಚರಂಡಿಗಳೆಲ್ಲ ಕೆಂಪು ಮಿಶ್ರಿತ ನೀರಿನಿಂದ ತುಂಬಿ ಹೋದವು. ಮಳೆಯ ರೌದ್ರತೆಗೆ ನನ್ನನ್ನು ನಾನೆ ಕಳೆದುಕೊಂಡೆ. ಐದಾರು ನಿಮಿಷಗಳೆ ಕಳೆದಿರಬೇಕು.

"ಇಲ್ಲಿ ಕೇಳು...................................." ನಾನು ಮಳೆಯ ಮೋಡಿಯಿಂದ ಹೊರಬಂದೆ.
"ಕರೆದ್ಯಾ?........... ಏನೋ ಹೇಳ್ಬೇಕು ಅಂದೆ....." ಅವಳನ್ನು ನೆನಪಿಸಿದೆ.
"......................................." ಅವಳ ಮೌನ ಮತ್ತೆ ಮಳೆಯೆಡೆಗೆ ಗಮನ ಹರಿಸಲು ಅವಕಾಶ ಮಾಡಿಕೊಟ್ಟಿತು.
"ನನ್ನನ್ನು ಮರೆತುಬಿಡು......"
"ಏನು!!!!!.........." ಭ್ರಮಾಲೋಕದಿಂದ ಎಚ್ಚೆತ್ತವನಂತೆ ಪ್ರಶ್ನಿಸಿದೆ.
"ನನ್ನ ಬಳಿ ಸಮಯವಿಲ್ಲ. ಮನೇಲಿ ಸುಳ್ಳು ಹೇಳಿ ಬಂದಿದೀನಿ, ನನ್ನನ್ನು ಮರೆತುಬಿಡು. ನಮ್ಮ ಸಂಭಂದ ಇಲ್ಲಿಗೆ ನಿಲ್ಲಿಸೋಣ" ಅಳತೊಡಗಿದಳು.
"ಏನ್ ತಮಾಷೆ ಮಾಡ್ತೀಯಾ? " ಆತಂಕಗೊಂಡಿದ್ದೆ.
"..........................." ಮತ್ತೆ ಮೌನ. ಕಣ್ಣೀರು ಅವಳ ಕಪಾಲಗಳನ್ನು ತೋಯಿಸಿದ್ದವು.
"......... ಇನ್ನೆರಡು ದಿನಗಳಲ್ಲಿ ನನ್ನ ನಿಶ್ಚಿತಾರ್ಥ. ನನ್ನ ಮನೆಯವರನ್ನು ಎರುರಿಸಲು ನನ್ನಿಂದಾಗಲಿಲ್ಲ. ಕ್ಷಮಿಸಿಬಿಡು" ಬಿಕ್ಕತೊಡಗಿದಳು.
ನನಗೆ ಮಾತೇ ಹೊರಡಲಿಲ್ಲ. ತಲೆ ಸುತ್ತುವಂತೆನಿಸಿ ಗೋಡೆಯನ್ನು ಹಿಡಿದು ಕೂರಲೆತ್ನಿಸಿದೆ. ನನ್ನ ಪರಿಸ್ಥಿತಿಯನ್ನರಿತ ಅವಳು ಹತ್ತಿರ ಬಂದು ಕೈ ಹಿಡಿದುಕೊಂಡಳು.
"ಯಾಕೇ ಹೀಗ್ ಮಾಡ್ದೆ......" ತಡೆಯಲಾರದೆ ಕಣ್ಣೀರು ಜಿನುಗಿತು.
"ಕ್ಷಮಿಸಿಬಿಡೋ................." ಅಪರಾಧಿ ಮನೋಭಾವ ಅವಳಲ್ಲಿತ್ತು.
ನನ್ನ ಕಣ್ಣೀರು ಒರೆಸಿ, ತಾನೂ ಕಣ್ಣೀರು ಒರೆಸಿಕೊಂಡು "ನನಗಿಂತ ಒಳ್ಳೇ ಹುಡುಗಿ ಸಿಕ್ತಾಳೆ ಬಿಡು" ಎಂದು ಸಾಂತ್ವಾನಿಸಿದಳು.
ಸನಿಹ ಬಂದು ಹಣೆಯನ್ನೊಮ್ಮೆ ಚುಂಬಿಸಿ "ಈ ಪಾಪಿನ ಯಾವತ್ತೂ ನೆನಪಿಸಿಕೊಳ್ಳಬೇಡ" ಎಂದು ಹೇಳಿ ಛತ್ರಿ ಬಿಡಿಸಿ ಓಡತೊಡಗಿದಳು. ಮಳೆಗೆ ಇದಾವುದರ ಪರಿವೆಯೇ ಇರಲ್ಲಿಲ್ಲ. ಇಂತಹ ಎಷ್ಟು ಅಂತ್ಯಗಳನ್ನು ಕಂಡಿತ್ತೋ ಈ ಮಳೆ.

ಬಯಲು ದಾಟಿ ಮನೆ ಹಾದಿ ಹಿಡಿದಾಗ ಮಳೆ ತೃಪ್ತಿಗೊಂಡು ನಿಲ್ಲತೊಡಗಿತು. ಒಂದೂವರೆ ವರ್ಷದಿಂದ ಪ್ರೀತಿಯ ಮಳೆಗೈದು ಬೆಳೆಸಿದ್ದ ಸಂಭಂದವನ್ನು ಕೇವಲ ಹತ್ತು ಮಾತಾಡಿ, ನಿಮಿಷಗಳಲ್ಲೇ ಮರೆಯುವುದು, ಭಾವನೆಗಳನ್ನು ಬಟ್ಟೆ ಬದಲಿಸಿದಂತೆ ಬದಲಿಸುವುದು ಸಾಧ್ಯವೇ ಎನ್ನಿಸಿತು. ಕರ್ಚೀಫಿನಿಂದ ಹಿಡಿದು ಪೆನ್ನು, ಪುಸ್ತಕ, ತಿಂಡಿ, ಮನಸ್ಸು, ಭಾವನೆ, ಕನಸುಗಳವರೆಗೆ ಎಲ್ಲವನ್ನೂ ಹಂಚಿಕೊಂಡಿದ್ದ ನಾವು ಇನ್ನು ಮುಂದೆ ಯಾವುದೇ ಸಂಭಂದವಿಲ್ಲದೆ ಬಾಳುವುದನ್ನು ನನಗೆ ಚಿತ್ರಿಸಿಕೊಳ್ಳಲ್ಲೂ ಆಗಲಿಲ್ಲ. ಅವಳಲ್ಲಿ ಈ ಎಲ್ಲಾ ಪ್ರಶ್ನೆಗಳನ್ನೊ ಕೇಳಬೇಕೆಂದೆನಿಸಿ ಕರೆ ಮಾಡಿದೆ. ಆ ಕಡೆಯಿಂದ ಉತ್ತರ ಬರಲಿಲ್ಲ. ಅವಳೂ ಇಂಥದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಳೇನೊ. ಕೊನೆಗೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ದಿನಕಳೆದ ಹಾಗೆ ಎಲ್ಲವೂ ಭೂತಕಾಲವನ್ನು ಹೊಕ್ಕವು. ಕೆಲವೊಮ್ಮೆ ಇಷ್ಟು ಸುಲುಭವಾಗಿ ಸೋತೆನಲ್ಲ ಎಂದೆನಿಸುತ್ತದೆ. ನಿಜವಾಗಲೂ ಯಾವುದು ಸೋಲು, ಯಾವುದು ಗೆಲುವು ಅನ್ನೊದೆ ಗೊತ್ತಾಗದ ಸ್ಥಿತಿ ತಲುಪಿದ್ದೇನೆ.

ಮಳೆ ನೋಡುತ್ತ ಕಿಟಕಿಯ ಮುಂದೆ ನಿಂತಿದ್ದ ನನಗೆ ಮಳೆ ನಿಂತಿದ್ದು ಅರಿವಿಗೇ ಬರಲಿಲ್ಲ. ಮಳೆ ನಿಂತಿದೆ. ಆದರೆ ನೆಲವೆಲ್ಲಾ ಕೆಸರಾಗಿದೆ. ನನ್ನ ಮನಸೂ ಕೂಡ. ಕೆಸರು ಒಣಗಿ ಗಟ್ಟಿಯಾಗಲು ಇನ್ನೂ ಎರಡು ದಿನಗಳಾದರೂ ಬೇಕು, ಅದೂ ಮತ್ತೊಮ್ಮೆ ಮಳೆ ಬಾರದಿದ್ದರೆ.

( ಇದು ನನ್ನ ಅನುಭವ ಅಲ್ಲ ............................. ಇ ರೀತಿ ಯಾರಿಗೂ ಆಗುವುದು ಬೇಡ .......................)

Tuesday, April 28, 2009

ಸ್ವರಚಿತ ಕವನಗಳು

ಹುಡುಕಾಟ V/s ಹುಡುಗಾಟ

ಬಾಳಲ್ಲಿ ಇರಬೇಕು ಸ್ವಲ್ಪ ಹುಡುಗಾಟ,
ಇಲ್ಲವಾದರೆ ಬಾಳಿನ ನೆಮ್ಮದಿ ಗಾಗಿ ದಿನವು ಮಾಡಬೇಕು
........................... ಹುಡುಕಾಟ


೨೦ ೨೦ ಕ್ರಿಕೆಟ್

ಇದೋ ಬಂದಿದೆ IPL ಆಟ
batsman ಗಳ ಹೊಡೆದಾಟ
bowler ಗಳ ಪರದಾಟ
chears ಹುಡುಗಿರ ಕುಣಿದಾಟ
BCCI ಗೆ ಹಣದ ಹರಿದಾಟ
ಕೇಳುವವರಿಲ್ಲ ಸೋತ ತಂಡಗಳ ಮಾಲೀಕರ ಗೋಳಾಟ ............................


ದೋಸ್ತ್ ......

ಜೀವನ ಎಂಬ ಕ್ಯಾಮೆರಾದಲ್ಲಿ,

ಮನಸು ಎಂಬ ರೀಲು ಹಾಕಿ,

ಸ್ನೇಹ ಎಂಬ ಬಟನ್ ಒತ್ತಿದಾಗ,

ಈ ನನ್ನ ಹೃದಯದಲ್ಲಿ ಮೂಡುವುದೆ ನಿಮ್ಮ ಭಾವಚಿತ್ರ. !!!


ಜಗವೆಲ್ಲ ಮಲಗಿರಲು........

ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ....
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ............
ಯಾಕಂದ್ರೆ ಅವನು ಕಾಲ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ.......

Monday, April 20, 2009


ಶಕುಂತಲೆ.............

ಬಹಳ ದಿನಗಳ ಬಳಿಕ ಶಕುಂತಲೆಯ

ನೆನಪಾದ ದುಶ್ಯಂತ ಕಾಡಿಗೆ ಹೋದ

ಅಲ್ಲೇ ಆತ ಬಿಟ್ಟು ಹೋದಲ್ಲೆ ಅದೇ

ಆಶ್ರಮದಂಗಳದಲ್ಲೆ ಕುಳಿತಿದ್ದಳು ಆಕೆ...

ಬಳಿಸಾರಿ ಕಣ್ಣಲ್ಲಿ ಕಣ್ಣಿಟ್ಟು ನೋಡಹೊರಟನಾತ

ಆಕೆಯ ಕಣ್ಣಲ್ಲಿ ಅವನಿಗೆ ಕಂಡಿದ್ದು

ಅವಳಲ್ಲ...

ಸತ್ತ ಶಾಕುಂತಲೆ ಮತ್ತು ಶೂನ್ಯ


Thursday, April 16, 2009

ಇನ್ನೊಂದು ಇಷ್ಟು ಕವನಗಳು ...........

. ಪ್ರೇಮಗೀತೆ .
ನಿನಗಾಗಿ
ನ ಬರೆದೆ ಪ್ರೇಮಗೀತೆ
ಆದರೆ...
ಅದು ನಿನಗೆ ತಿಳಿಯದಾಗಿ
ನ ಕಳೆದೆ ಜೀವನವನ್ನು
ಕೇಳುತ್ತಾ ವಿರಹಗೀತೆ...


ಪ್ರೀತಿ ಅಂದ್ರೆ ಇದೇನಾ?

ಯಾವ ಹುಡುಗಿನಾ ನೋಡಿದ್ರೂ ನೀನೆ ಅನ್ನಿಸೋ ಭಾವನೆ,
ಎದುರಿಗೆ ಬಂದರೆ, ಎದೆ ಝಲ್ ಅನ್ನೋ ಕಸಿವಿಸಿ..


ಮಿಲನ ಆ ಮಿಲನ, ನಿನ್ನ ಕಣ್ಣಿನ ಆ ಮಿಲನ
ಹೊಡೆಯಿತು ಎನ್ನದೆಗೆ ಬಾಣ
ಚೂರಾಯಿತು ಈ ಪ್ರಾಣ

ನಿಜವೋ ಆ ನೋಟ ಮಜವೋ
ತಿಳಿಯದಾದೆನು ನಾನಂದು
ಒಲವ ತೋರಬಾರದ ನೀನಿಂದು

ನನ ಕಲ್ಲಿನ ಆ ಹೃದಯ
ಕಂಪಿಸಿದೆ ಇಂದು
ನಿನ ಒಲವಲಿ ತಾ ಮಿಂದು
ಹಾಡಿದೆ ಈ ಕವನ

ನನ್ನ ತನು ಮನದ ನೀರೆ
ದಯೆ ತೋರುತ ನೀ ಬಾರೆ


ಚಳಿಯಲ್ಲಿ....
ಹೊರಗೆ ಮಳೆಯಿರಲಿ , ಚಳಿಯಿರಲಿ...
ನನಗೆ ಬೇಕಾಗುವುದಿಲ್ಲ ಹೊದಿಕೆ...
ಯಾಕೆಂದರೆ.......................
ಒಳಗೆ ನನ್ನವಳು
ಪಕ್ಕದಲ್ಲಿ ತಬ್ಬಿ ಮಲಗಿರುವಾಗ...
ನನಗೆ ಯಾವಾಗಲೂ ಸೆಕೆ....


ಗೆಳತಿ...
ನಾನು SMS ಕಳುಹಿಸಿ ಕಳುಹಿಸಿ ಸೋತೆ...
ನೀನು SMS ಕಳುಹಿಸದೆ ಸೋತೆ'ಯ?..
ತುಂಡಾಗಬಹುದು ನಮ್ಮೀ ಸ್ನೇಹದ ಸೇತುವೆ..
ಹರಿಯಿಯಬಹುದು ಕಣ್ಣೀರಿನ ಕಾಲುವೆ....(?)


ನೆನಪು ~~
ನನ್ನ ಬಾಳ ಬೆಳಗುವ
ಬೆಳಕಾಗುವೆಯೆಂದೆ...
ನನ್ನ ಜೀವನದ
ನೆರಳಾಗಿ ಬರುವೆಯೆಂದೆ...
ಆದರೆ..................
ನೆನಪಾಗಿಯೆ ಉಳಿದೆ.....(~_~)


ನೀ ಲ್ಯಾಪ್ ಟಾಪ್ ಆದರೆ
ನಾ ಕಂಪ್ಯೂಟರ್
ನೀ ಡಿ ವಿ ಡಿ ಯಾದರೆ
ನಾ ಆಡಿಯೊ ಕ್ಯಾಸೆಟ್
ನೀ ಲಾಸ್ ವೇಗಸ್ ಆದರೆ
ನಾ ಬಾಂಬೆ ಸಿಟಿ
ನೀ ಹುಣ್ಣಿಮೆಯ ಚಂದಿರ ವಾದರೆ
ನಾ ಅಮವಾಸ್ಯೆಯ ರಾತ್ರಿ...


ಗೆಳತಿ
ನೀ ಹೂ ವಾದರೆ..
ನಾ ದುಂಬಿಯಾಗುವೆ
ನೀ ದುಂಬಿಯಾದರೆ..


- ವಿಮೆ-
ಗೆಳತಿ ನಾ ನಿನ್ನ
ಹಗಲಿರುಳು ಪ್ರೀತಿಸಿ ಕೊನೆಗೂ ಸೋತೆ
ಆದರೆ...
ನಾ ನಿನ್ನ ಪ್ರೀತಿಗಾಗಿ
ಮಾಡಿಸಿದ್ದರೆ ವಿಮೆ
ವಿಮೆಯ ಹಣದಿಂದ
ಗೆಲ್ಲುತಿರಬಹುದಿತ್ತು....(?)


ಕವನಾ ಮೂಡುವುದು (Muduvudu)
ಕಲ್ಪನೆಯಲ್ಲಾ ಅಥವಾ ಕನಸಲ್ಲಾ ??????????

ಕವನಾ ಮೂಡುವುದು(Muduvudu)

ಕಣ್ಣುಗಳು ಕಲ್ಪನೆಯಲ್ಲಿ ಕಲೆತಾಗ ,,,,,,,,,,,,,,,
ಕವಿ ನಿಸರ್ಗದಲ್ಲಿ ಬೆರೆತಾಗ ,,,,,,,,,,,,,,,,,,,
ಮನಸ್ಸನ್ನು ಕನಸು ಕವಿದಾಗ ,,,,,,,,,,,,,,,
ರಸ ನಿಮಿಷಗಳ ಸವಿದಾಗ ,,,,,,,,,,,,,,,,,,


ಕೆರೆ ನೀರಿಗೆ ಸುಳಿಗಾಳಿ ಸ್ವರ್ಶಿಸಿದಂತೆ,

ಅವಳ ಕಳೆಮೊಗದಲ್ಲಿ ಎಳೆನಗುವೊಂದು ಮಿಂಚುತಿತ್ತು.

ಮಿಂಚಿಗೆ ನಾನು ಕರಗಿ, ಮಳೆಯಾಗಿ ನೀರಾಗಿ ಹರಿದುಹೋಗುತ್ತಿದ್ದೆ.

ಸೇರುವುದೆಲ್ಲಿಗೋ ಅರಿಯೇ ಆದರೂ ಹರಿಯಬೇಕಿತ್ತು

ಹರಿಯುತ್ತಿದ್ದೆ ಅಷ್ಟೆ.




ಕೆಲವೊಂದು ಇಷ್ಟವಾದ ಅಲ್ಲಿ ಇಲ್ಲಿ ಕಂಡ ಕವನಗಳು

ಸ್ನೇಹಬಗ್ಗೆ

೧. ಸ್ನೇಹದ ಮಧುರತೆಯ ಸವಿಯಲು
ನನ್ನೆಲ್ಲಾ ನೋವುಗಳ ಮರೆಯಲು
ನಿಮ್ಮ ಸವಿ ಸನಿಹವ ಪಡೆಯಲು
ಕಾತುರದಿಂದ ಕಾಯುತಿರುವೆ
ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ

೨. ನೀನೆಷ್ಟು ಶ್ರೀಮಂತ ಅಂತಾ
ಗೊತ್ತಾಗಬೇಕ್ಕೆಂದರೆ…
ನಿನ್ನಲ್ಲಿರುವ ದುಡ್ಡನ್ನು
ಎಣಿಸುತ್ತಾ ಕೂರಬೇಡ.
ಒಂದು ಹನಿ ಕಣ್ಣಿರು
ಹಾಕಿ ನೋಡು
ಅದನ್ನೊರೆಸಲು
ನಿನ್ನ ಸುತ್ತ ಎಷ್ಟು ಮಂದಿ
ಸೇರಿರುತ್ತಾರೋ ಎಣಿಸಿ ನೋಡು…

೩. ಅರಿಯದ ಪ್ರೀತಿ , ಮರೆಯದ ಸ್ನೇಹ ,
ಅಳಿಸಿ ಹೋಗುವ ಈ ಪುಸ್ತಕದಲ್ಲಿ ! ಏನೆಂದು ಬರೆಯಲಿ !
ಆದರೂ ಬರೆಯುತ್ತೇನೆ !
"ಸ್ನೇಹ"ವೆಂಬ ಎರಡಕ್ಷರ ಅಮರವಾಗಿರಲಿ !

೪. ಇದ್ದಾರೆ ಪ್ರಪಂಚದಲ್ಲಿ ಹಲವಾರು ಜನ,
ಬಯಸುತ್ತಾರೆ ಎಲ್ಲ ಪ್ರೀತಿ ವಿಶ್ವಾಸವಿರುವ ಮನ,
ನಿನ್ನ ನನ್ನ ಪರಿಚಯವಾದ ಆ ದಿನ,
ಸ್ನೇಹ ಹುಟ್ಟುವ ಹಾಗೆ ಮಾಡಿತು ಯಾವುದೊ ಒಂದು ಸೆಳೆತನ,
ಇಂದಿಗೂ ಬೇರಾಗದಂತಿದೆ ನಮ್ಮಿಬರ ಗೆಳತನ.
ಇದು ಹೀಗೆ ಅಮರವಾಗಿರಲಿ ಗೆಳಯ/
( ಯಾವ್ದೋ ಆಟೋಗ್ರಾಫ್ ಬುಕ್ ಅಲ್ಲಿ ಕಂಡಿದ್ದು )

ಹುಡಗಿಯರ ಬಗ್ಗೆ ಒಂದಿಷ್ಟು .

೧. ನಾವು ಮುಗ್ದ ಹುಡುಗರಾಗಿ ಇರ್ಥಿವ್ವಿ
ಆದ್ರೆ ಈ ಹುಡುಗಿರು ತಂಗಾಳಿ ಯಾಗಿ ಬಂದು,
ಬರಿಧಾದ ಮನಸ್ಸಿನ ಅಂಗಳದಲ್ಲಿ ಪ್ರೀತಿ ಅನ್ನೋ ರಂಗೋಲಿ ಬರೆದು ..
ಕಾಣದೆ ಇರೋ ಕನಸಿನ ಲೋಕಾನೆ ತೋರಿಸ್ತಾರೆ
ಇನ್ನು ನಮ್ಮ ಮುಗ್ದ ಮನಸ್ಸಿಗೆ ಅವರನ್ನು ಬಿಟ್ಟು
ಬೇರೆ ಪ್ರಪಂಚನೆ ಇಲ್ಲ ಅನ್ನೋವಾಗ
ಅಪ್ಪ ಹೇಳ್ದ , ಅಣ್ಣ ಹೇಳ್ದ ,ಅಮ್ಮ ಹೇಳ್ದ್ಲುಅಂತ ಮೋಸದ ಮಳೆ ಸುರಿದು
ಪ್ರೀತಿ ರಂಗೋಲಿ ಜೊತೆಗೆ ಮನಸ್ಸನು ಕೊಂದು
ಬರಿ ನೋವಿನ ನೆನಪುಗಳನ್ನು ಬಿಟ್ಟು ಹೋಗ್ತಾರೆ .
ಹುಡುಗೀರೆ ನೀವೇಕೆ ಹೇಗೆ..................????????????

೨. ನೀನಿಲ್ಲದೇ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ
ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೇ ನೀನು
ಎದೆಯಾಸೆ ಎನೋ ಎಂದು ನೀ ಕಾಣದಾದೇ
ನಿಶೆಯೊಂದೇ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೇ ನಿನ್ನಿಂದ ನಾ ಬಯಸಿದೆ

ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ
ಜೊತೆ ಇರುವೆಯ ಗೆಳತಿ................?????

೩. ಮಳೆಯಲ್ಲಿ ನೆನೆಯುವಾಗ
ಮೊದಲ ನೆನಪು ನಿನ್ನದೇ
ಸೂರ್ಯನು ಉದಯಿಸುವಾಗ
ಮೊದಲ ನೆನಪು ನಿನ್ನದೇ
ನಾನು ಬರೆಯುವ ಮೊದಲ ಕವನ ನಿನ್ನದೇ

೪. ಹೇ ಗೆಳತಿ...............
ಬದುಕು ಅಂದರೆ ನದಿಯ ಹಾಗೆ
ಕೊನೆ ಇಲ್ಲದ ಪಯಣ ……
ಯಾವುದೂ ನಮ್ಮ ಜೊತೆ
ಉಳಿಯುವುದಿಲ್ಲ ……….
ಉಳಿಯುದು ಒಂದೇ……………
ಅದು ನೀನು ಹೃದಯ ತಟ್ಟಿದ ನೆನಪು ಮತ್ತು ಕೊಟ್ಟ ನೋವು ಮಾತ್ರ

೫. ನನ್ನ ನಿನ್ನ ಜೀವನದಲ್ಲಿ ಕಹಿಯಾದ ..
ಮತ್ತು ಮದುರವಾದ ಭಾವನೆಗಳು ಹಂಚಿಕೊಳ್ಳಲು ..
ಒಂದು ಒಳ್ಳೆ ಹೃದಯದ ಅವಶ್ಯಕತೆ ಇದೆ ಅಲ್ಲವಾ ???? .
ಜಗತ್ಹನು ಬೆಳಗಲು ಸೂರ್ಯ ಎಷ್ಟು ಮುಖ್ಯವೋ ,
ಮಗುವನ್ನು ಬೆಳಸಲು ತಾಯಿ ಎಷ್ಟು ಮುಖ್ಯವೋ ..
ಹಾಗೆ ಸ್ನೇಹವೆಂಬುದು ಪ್ರತಿಯುಬ್ಬ ಜೀವಿಗೂ ಬಹು ಮುಖ್ಯ
ಸ್ನೇಹಮೃತವನು ಒದಗಿಸುವೆಯ ಗೆಳತಿ..............???

೬. ಮಾತು ದೂರದರೇನು
ಭಾಂಧವ್ಯದ ನೆನಪು ಸದಾ ಹಸಿರು
ಮಾಸದ ಮಾಗದ ಹಳೆ ನೆನಪು
ಕಾಡುತಿದೆ ಕಾಡಿಸುತಿದೆ ನಿನ್ನಯ ಪ್ರೀತಿ
ಪ್ರೀತಿಯ ಕಡಲಿನ ಮಣಿಮುತ್ತಿನಾಗೆ
ಕಾಪಾಡುವ ಹೊತ್ತಲ್ಲಿ ನನ್ನ ಮರಿಬೇಡ ಪ್ರಿಯೆ..........

೭. ಸುಮ್ಮನೆ ಇದ್ದ ನನ್ನ ಮನಸ್ಸಲ್ಲಿ
ನಿನ್ನ ಭಾವನೆಗಳ ಬೀಜ ಬಿತ್ತಿ,
ಪ್ರೀತಿಯ ಸಸಿ ಚಿಗುರುವ ಮುನ್ನವೆ
ಅದನ್ನ ಚಿಗುಟಿ ಹಾಕಿದ ಹುಡುಗಿ ನಿನ್ಯಾರೆ???

ಸ್ನೇಹ ಮಾತಾಡುತ್ತೆ
ಪ್ರೀತಿ ಸುಮ್ಮನಿರುತ್ತೆ
ಸ್ನೇಹ ನಗಿಸುತ್ತೆ
ಪ್ರೀತಿ ಅಳಿಸುತ್ತೆ
ಸ್ನೇಹ ಸೇರಿಸುತ್ತೆ
ಪ್ರೀತಿ ದೂರ ಮಾಡುತ್ತೆ
ಆದರೂ . . .
ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ

ಆಗೆಲ್ಲ ನನ್ನ ಕಣ್ಣಲ್ಲೇ
ಕನಸುಗಳು ಗೂಡುಕಟ್ಟುತ್ತವೆ ಎಂದು
ಬೀಗುತ್ತಿದ್ದ ಕಾಲ
ವಯಸ್ಸು ಹದಿನೈದೋ ಹದಿನಾರೋ...
ಚಾದರದ ಒಳಗೊಳಗೇ ಮುದುರಿ,
ಮಗ್ಗುಲು ಬದಲಾಯಿಸದೆ
ಬೆಳಗು ಹಾಯಿಸಿದ ರಾತ್ರಿಗಳು
ಇಂದು ಯೋಚಿಸಿದರೆ
ತೀರ ಸಿಲ್ಲಿ ಸಿಲ್ಲಿ!

ಜಡೆ ಹೆಣೆಯುವಾಗ
ಕನ್ನಡಿಯ ಆ ತುದಿಯಲ್ಲಿ
ಯಾರೋ ಕಣ್ಣು ಮಿಟುಕಿಸಿದಂತೆ ಎನಿಸಿ
ಬೈತಲೆಗೆ ತುಟಿ ತಾಕಿಸಿದಂತೆ ಭ್ರಮಿಸಿ
ಸರಸರನೆ ಹೆಜ್ಜೆ ಹಾಕಿ
ಕಿಟಕಿಯ ಬದಿಯ ಜಾಗವನ್ನೇ ಆಯ್ದು
ರಸ್ತೆಯತ್ತ ನೋಟ ನೆಟ್ಟಾಗ
ಕಣ್ಣಲ್ಲಿ ಹಸಿ-ಹಸಿ ವಿರಹ...

ದೇಹ ಚಿಗಿತುಕೊಳ್ಳುವ ಹೊತ್ತಲ್ಲಿ
ಪ್ರತಿ ಎಲೆಯ ವಾಸನೆಯನ್ನೂ
ಗ್ರಹಿಸುವ ಉಮೇದಿನಲ್ಲಿ
ಕಣ್ಣಲ್ಲಿ ಗೂಡು ಕಟ್ಟಿದ್ದ ಕನಸು
ಒಬ್ಬರಿಂದೊಬ್ಬರಿಗೆ ವರ್ಗ
ವಾಗುತ್ತ - ಬಣ್ಣಬಣ್ಣದ
ಮೊಟ್ಟೆಗಳನ್ನು ಇಡುತ್ತ ಹೋದದ್ದು
ತಿಳಿಯಲೇ ಇಲ್ಲ
ಪುಟಾಣಿ ಅಲೆಗಳನ್ನು
ಗ್ರಹಿಸುವ ವಯಸ್ಸೂ ಅದಲ್ಲ

ದಿನ ಕಳೆದಂತೆ
ಕನಸು ಮೊಟ್ಟೆಗಳಲ್ಲಿ ಯಾವವೂ
ಮರಿಯಾಗದೆ ಜಳ್ಳಾಗಿ
ಬಿಟ್ಟವು ಬರಿದೇ ತಮ್ಮ
ಚಿಪ್ಪುಗಳನ್ನು ಉಳಿಸಿ...
ಆದರೂ
ನಿಮಗೆಲ್ಲ ಋಣಿ ನಾನು
ಅಂಗಾಂಗ ಚಿಗುರಿಸಿದ್ದಕ್ಕೆ
ಕನಸ ಕುದುರಿಸಿದ್ದಕ್ಕೆ.

ಒಂದು ಮನವಿ.......................

ಯಾವ ಕಣ್ಣು ನಿಮ್ಮನ್ನು
ನೋಡ ಬಯಸುವುದಿಲ್ಲವೋ …….
ಆ ಕಣ್ಣೀ ನತ್ತ ತಿರುಗಿಯೂ
ನೋಡಬೇಡಿ……..
ನಿಮ್ಮನೆ ಹುಡುಕುವ ಕಣ್ಣುಗಳಿಂದ
ಯಾವತ್ತೂ ಮರೆಯಾಗಬೇಡಿ ……
ಈ ದಿನ ನಿಮ್ಮ ಪುಟ್ಟ ಹೃದಯಕ್ಕೆ ಸಂತೋಷ ತರಲಿ

ಇಂತೀ ಪ್ರೀತಿಯ
ನಾಗೇಶ್