ಸ್ನೇಹದ ಬಗ್ಗೆ
೧. ಸ್ನೇಹದ ಮಧುರತೆಯ ಸವಿಯಲು
ನನ್ನೆಲ್ಲಾ ನೋವುಗಳ ಮರೆಯಲು
ನಿಮ್ಮ ಸವಿ ಸನಿಹವ ಪಡೆಯಲು
ಕಾತುರದಿಂದ ಕಾಯುತಿರುವೆ
ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ
೨. ನೀನೆಷ್ಟು ಶ್ರೀಮಂತ ಅಂತಾ
ಗೊತ್ತಾಗಬೇಕ್ಕೆಂದರೆ…
ನಿನ್ನಲ್ಲಿರುವ ದುಡ್ಡನ್ನು
ಎಣಿಸುತ್ತಾ ಕೂರಬೇಡ.
ಒಂದು ಹನಿ ಕಣ್ಣಿರು
ಹಾಕಿ ನೋಡು
ಅದನ್ನೊರೆಸಲು
ನಿನ್ನ ಸುತ್ತ ಎಷ್ಟು ಮಂದಿ
ಸೇರಿರುತ್ತಾರೋ ಎಣಿಸಿ ನೋಡು…
೩. ಅರಿಯದ ಪ್ರೀತಿ , ಮರೆಯದ ಸ್ನೇಹ ,
ಅಳಿಸಿ ಹೋಗುವ ಈ ಪುಸ್ತಕದಲ್ಲಿ ! ಏನೆಂದು ಬರೆಯಲಿ !
ಆದರೂ ಬರೆಯುತ್ತೇನೆ !
"ಸ್ನೇಹ"ವೆಂಬ ಎರಡಕ್ಷರ ಅಮರವಾಗಿರಲಿ !
೪. ಇದ್ದಾರೆ ಪ್ರಪಂಚದಲ್ಲಿ ಹಲವಾರು ಜನ,
ಬಯಸುತ್ತಾರೆ ಎಲ್ಲ ಪ್ರೀತಿ ವಿಶ್ವಾಸವಿರುವ ಮನ,
ನಿನ್ನ ನನ್ನ ಪರಿಚಯವಾದ ಆ ದಿನ,
ಸ್ನೇಹ ಹುಟ್ಟುವ ಹಾಗೆ ಮಾಡಿತು ಯಾವುದೊ ಒಂದು ಸೆಳೆತನ,
ಇಂದಿಗೂ ಬೇರಾಗದಂತಿದೆ ನಮ್ಮಿಬರ ಗೆಳತನ.
ಇದು ಹೀಗೆ ಅಮರವಾಗಿರಲಿ ಗೆಳಯ/
( ಯಾವ್ದೋ ಆಟೋಗ್ರಾಫ್ ಬುಕ್ ಅಲ್ಲಿ ಕಂಡಿದ್ದು )
ಹುಡಗಿಯರ ಬಗ್ಗೆ ಒಂದಿಷ್ಟು .
೧. ನಾವು ಮುಗ್ದ ಹುಡುಗರಾಗಿ ಇರ್ಥಿವ್ವಿ
ಆದ್ರೆ ಈ ಹುಡುಗಿರು ತಂಗಾಳಿ ಯಾಗಿ ಬಂದು,
ಬರಿಧಾದ ಮನಸ್ಸಿನ ಅಂಗಳದಲ್ಲಿ ಪ್ರೀತಿ ಅನ್ನೋ ರಂಗೋಲಿ ಬರೆದು ..
ಕಾಣದೆ ಇರೋ ಕನಸಿನ ಲೋಕಾನೆ ತೋರಿಸ್ತಾರೆ
ಇನ್ನು ನಮ್ಮ ಮುಗ್ದ ಮನಸ್ಸಿಗೆ ಅವರನ್ನು ಬಿಟ್ಟು
ಬೇರೆ ಪ್ರಪಂಚನೆ ಇಲ್ಲ ಅನ್ನೋವಾಗ
ಅಪ್ಪ ಹೇಳ್ದ , ಅಣ್ಣ ಹೇಳ್ದ ,ಅಮ್ಮ ಹೇಳ್ದ್ಲುಅಂತ ಮೋಸದ ಮಳೆ ಸುರಿದು
ಪ್ರೀತಿ ರಂಗೋಲಿ ಜೊತೆಗೆ ಮನಸ್ಸನು ಕೊಂದು
ಬರಿ ನೋವಿನ ನೆನಪುಗಳನ್ನು ಬಿಟ್ಟು ಹೋಗ್ತಾರೆ .
ಹುಡುಗೀರೆ ನೀವೇಕೆ ಹೇಗೆ..................????????????
೨. ನೀನಿಲ್ಲದೇ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ
ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೇ ನೀನು
ಎದೆಯಾಸೆ ಎನೋ ಎಂದು ನೀ ಕಾಣದಾದೇ
ನಿಶೆಯೊಂದೇ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೇ ನಿನ್ನಿಂದ ನಾ ಬಯಸಿದೆ
ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಣಗಿರುವ ಎದೆನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ
ಜೊತೆ ಇರುವೆಯ ಗೆಳತಿ................?????
೩. ಮಳೆಯಲ್ಲಿ ನೆನೆಯುವಾಗ
ಮೊದಲ ನೆನಪು ನಿನ್ನದೇ
ಸೂರ್ಯನು ಉದಯಿಸುವಾಗ
ಮೊದಲ ನೆನಪು ನಿನ್ನದೇ
ನಾನು ಬರೆಯುವ ಮೊದಲ ಕವನ ನಿನ್ನದೇ
೪. ಹೇ ಗೆಳತಿ...............
ಬದುಕು ಅಂದರೆ ನದಿಯ ಹಾಗೆ
ಕೊನೆ ಇಲ್ಲದ ಪಯಣ ……
ಯಾವುದೂ ನಮ್ಮ ಜೊತೆ
ಉಳಿಯುವುದಿಲ್ಲ ……….
ಉಳಿಯುದು ಒಂದೇ……………
ಅದು ನೀನು ಹೃದಯ ತಟ್ಟಿದ ನೆನಪು ಮತ್ತು ಕೊಟ್ಟ ನೋವು ಮಾತ್ರ
೫. ನನ್ನ ನಿನ್ನ ಜೀವನದಲ್ಲಿ ಕಹಿಯಾದ ..
ಮತ್ತು ಮದುರವಾದ ಭಾವನೆಗಳು ಹಂಚಿಕೊಳ್ಳಲು ..
ಒಂದು ಒಳ್ಳೆ ಹೃದಯದ ಅವಶ್ಯಕತೆ ಇದೆ ಅಲ್ಲವಾ ???? .
ಜಗತ್ಹನು ಬೆಳಗಲು ಸೂರ್ಯ ಎಷ್ಟು ಮುಖ್ಯವೋ ,
ಮಗುವನ್ನು ಬೆಳಸಲು ತಾಯಿ ಎಷ್ಟು ಮುಖ್ಯವೋ ..
ಹಾಗೆ ಸ್ನೇಹವೆಂಬುದು ಪ್ರತಿಯುಬ್ಬ ಜೀವಿಗೂ ಬಹು ಮುಖ್ಯ
ಸ್ನೇಹಮೃತವನು ಒದಗಿಸುವೆಯ ಗೆಳತಿ..............???
೬. ಮಾತು ದೂರದರೇನು
ಭಾಂಧವ್ಯದ ನೆನಪು ಸದಾ ಹಸಿರು
ಮಾಸದ ಮಾಗದ ಹಳೆ ನೆನಪು
ಕಾಡುತಿದೆ ಕಾಡಿಸುತಿದೆ ನಿನ್ನಯ ಪ್ರೀತಿ
ಪ್ರೀತಿಯ ಕಡಲಿನ ಮಣಿಮುತ್ತಿನಾಗೆ
ಕಾಪಾಡುವ ಹೊತ್ತಲ್ಲಿ ನನ್ನ ಮರಿಬೇಡ ಪ್ರಿಯೆ..........
೭. ಸುಮ್ಮನೆ ಇದ್ದ ನನ್ನ ಮನಸ್ಸಲ್ಲಿ
ನಿನ್ನ ಭಾವನೆಗಳ ಬೀಜ ಬಿತ್ತಿ,
ಪ್ರೀತಿಯ ಸಸಿ ಚಿಗುರುವ ಮುನ್ನವೆ
ಅದನ್ನ ಚಿಗುಟಿ ಹಾಕಿದ ಹುಡುಗಿ ನಿನ್ಯಾರೆ???
ಸ್ನೇಹ ಮಾತಾಡುತ್ತೆ
ಪ್ರೀತಿ ಸುಮ್ಮನಿರುತ್ತೆ
ಸ್ನೇಹ ನಗಿಸುತ್ತೆ
ಪ್ರೀತಿ ಅಳಿಸುತ್ತೆ
ಸ್ನೇಹ ಸೇರಿಸುತ್ತೆ
ಪ್ರೀತಿ ದೂರ ಮಾಡುತ್ತೆ
ಆದರೂ . . .
ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ
ಆಗೆಲ್ಲ ನನ್ನ ಕಣ್ಣಲ್ಲೇ
ಕನಸುಗಳು ಗೂಡುಕಟ್ಟುತ್ತವೆ ಎಂದು
ಬೀಗುತ್ತಿದ್ದ ಕಾಲ
ವಯಸ್ಸು ಹದಿನೈದೋ ಹದಿನಾರೋ...
ಚಾದರದ ಒಳಗೊಳಗೇ ಮುದುರಿ,
ಮಗ್ಗುಲು ಬದಲಾಯಿಸದೆ
ಬೆಳಗು ಹಾಯಿಸಿದ ರಾತ್ರಿಗಳು
ಇಂದು ಯೋಚಿಸಿದರೆ
ತೀರ ಸಿಲ್ಲಿ ಸಿಲ್ಲಿ!
ಜಡೆ ಹೆಣೆಯುವಾಗ
ಕನ್ನಡಿಯ ಆ ತುದಿಯಲ್ಲಿ
ಯಾರೋ ಕಣ್ಣು ಮಿಟುಕಿಸಿದಂತೆ ಎನಿಸಿ
ಬೈತಲೆಗೆ ತುಟಿ ತಾಕಿಸಿದಂತೆ ಭ್ರಮಿಸಿ
ಸರಸರನೆ ಹೆಜ್ಜೆ ಹಾಕಿ
ಕಿಟಕಿಯ ಬದಿಯ ಜಾಗವನ್ನೇ ಆಯ್ದು
ರಸ್ತೆಯತ್ತ ನೋಟ ನೆಟ್ಟಾಗ
ಕಣ್ಣಲ್ಲಿ ಹಸಿ-ಹಸಿ ವಿರಹ...
ದೇಹ ಚಿಗಿತುಕೊಳ್ಳುವ ಹೊತ್ತಲ್ಲಿ
ಪ್ರತಿ ಎಲೆಯ ವಾಸನೆಯನ್ನೂ
ಗ್ರಹಿಸುವ ಉಮೇದಿನಲ್ಲಿ
ಕಣ್ಣಲ್ಲಿ ಗೂಡು ಕಟ್ಟಿದ್ದ ಕನಸು
ಒಬ್ಬರಿಂದೊಬ್ಬರಿಗೆ ವರ್ಗ
ವಾಗುತ್ತ - ಬಣ್ಣಬಣ್ಣದ
ಮೊಟ್ಟೆಗಳನ್ನು ಇಡುತ್ತ ಹೋದದ್ದು
ತಿಳಿಯಲೇ ಇಲ್ಲ
ಪುಟಾಣಿ ಅಲೆಗಳನ್ನು
ಗ್ರಹಿಸುವ ವಯಸ್ಸೂ ಅದಲ್ಲ
ದಿನ ಕಳೆದಂತೆ
ಕನಸು ಮೊಟ್ಟೆಗಳಲ್ಲಿ ಯಾವವೂ
ಮರಿಯಾಗದೆ ಜಳ್ಳಾಗಿ
ಬಿಟ್ಟವು ಬರಿದೇ ತಮ್ಮ
ಚಿಪ್ಪುಗಳನ್ನು ಉಳಿಸಿ...
ಆದರೂ
ನಿಮಗೆಲ್ಲ ಋಣಿ ನಾನು
ಅಂಗಾಂಗ ಚಿಗುರಿಸಿದ್ದಕ್ಕೆ
ಕನಸ ಕುದುರಿಸಿದ್ದಕ್ಕೆ.
Subscribe to:
Post Comments (Atom)
ನಾಗೇಶ್...
ReplyDeleteಬಹಳ ಸುಂದರವಾಗಿದೆ...
ಇವೆಲ್ಲವನ್ನೂ ಒಂದೇ ಬಾರಿ ಹಾಕುವದಕ್ಕಿಂತ ಮೂರು ಭಾಗ ಮಾಡಿ ಹಾಕಿದ್ದರೆ ಇನ್ನೂ ಚೆನ್ನಾಗಿತ್ತು...
ಎಲ್ಲವೂ ಒಂದಕ್ಕಿಂತ ಮಿಗಿಲು...
ಅಭಿನಂದನೆಗಳು...
ಹೀಗೆ ಬರೆಯುತ್ತಾ ಇರಿ...
Nagesh,
ReplyDeleteyou have a nice poem collection. keep going!!
My blog is collection of food blogs only. your blog is not a food blog. So sorry I have not added your blog.
SUPERB BOSS... CONTINUE THESE WRITINGS
ReplyDeleteನಾಗೇಶ ಸರ್ ತುಂಬಾ ಚೆನ್ನಾಗಿ ಬರೆದಿರಿ
ReplyDeleteನನಗೆ ಎಲ್ಲಾ ಕವನಗಳು ತುಂಬಾ ಇಷ್ಟ ಆಯ್ತು
ನಿಮ್ಮ ಸಂಗ್ರಹಿಸುವ ಮನೋಭಾವಕ್ಕೆ ಧನ್ಯವಾದಗಳು.
ReplyDeleteನಿಮ್ಮ ಸಂಗ್ರಹಿಸುವ ಮನೋಭಾವಕ್ಕೆ ಧನ್ಯವಾದಗಳು.
ReplyDeleteತುಂಬಾ ಚೆನ್ನಾಗಿದೆ
ReplyDeletevery very nice
ReplyDeletevery very nice
ReplyDeleteಬಹಳ ಚೆನ್ನಾಗಿದೆ. ಬರೆಯುತ್ತಿರಿ ಹೀಗೆ.......
ReplyDeleteಸೂಪರ್
ReplyDeleteಸೂಪರ್
ReplyDeletesogasagide nimma collections. bhava anubhavisidarene chenna... nimagi endigu bareyuva ullasa kadime agadirali
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರ.....really Nice...
ReplyDeleteSupersir
ReplyDeleteನೀವು ಬರೆದ ಕವನಗಳು ನನಗೆ ತುಂಬಾ ಇಷ್ಟವಾಯಿತು
ReplyDelete