Tuesday, September 22, 2009
ಓ ನನ್ನ ಸಖಿ
ಈ ಸ್ನೇಹದ ಕಾಣಿಕೆಯು ನೀನು
ನಿನ್ನ ನೆನಪಿನಲ್ಲಿ ಇರುವ
ಆ ಮಾಯೆಯಾದರು ಏನು ?
ನಿನ್ನ ನೆನೆದರೆ ಆಗುವ
ಈ ಮನಸ್ಸಿನ ಆನಂದದ ಕಾರಣವೇನು ?
ವರುಷಗಳೇ ಕಳೆದು ಹೋದರು
ನಿನ್ನ ನೆನಪಲ್ಲಿರುವ ಆ ಹರುಷಕ್ಕೆ ಕಾರಣವೇನು ?
ನಿನ್ನ ಒಮ್ಮೆಯಾದರು ನೋಡದಿದ್ದರೂ
ನನ್ನ ಮನಸ್ಸಲ್ಲಿ ನಿನ್ನ ನೋಡಲು ಕಾರಣವೇನು ?
ಓ ನನ್ನ ಸಖಿ
ಈ ಸ್ನೇಹಕ್ಕೆ ಇಸ್ಟೊಂದು ಶಕ್ತಿ ಇರಲು ಕಾರಣವೇನು ?
ಅದೇನೇ ಇರಲಿ ಸದಾ ನಗುತಾ ಇರು ನೀನು.......
ಈ ಸ್ನೇಹಕೆ ನಿಜವಾಗಲೂ ಇಷ್ಟು ಶಕ್ತಿ ಇದ್ದರೆ
ನಿನ್ನ ಕಾಣುವ ಆ ದಿನವು ಎಂದು ಎಲ್ಲಿ ಹೇಗೆ ?
ನನ್ನ ಮನಸ್ಸಲ್ಲಿರುವ ಈ ಪ್ರಶ್ನೆಗಳಿಗೆ ಉತ್ತರವೇನು ?
ಓ ನನ್ನ ಸಖಿಯೇ
ಈ ಸ್ನೇಹದ ಕಾಣಿಕೆಯು ನೀನು
ನಿನ್ನ ನೆನಪಿನಲ್ಲಿ ಇರುವ
ಆ ಮಾಯೆಯಾದರು ಏನು ?
ಈ ಮನಸ್ಸಿನ ಆನಂದದ ಕಾರಣವೇನು ?
ನನ್ನ ಮನಸ್ಸಲ್ಲಿರುವ ಈ ಪ್ರಶ್ನೆಗಳಿಗೆ ಉತ್ತರವೇನು ?
ಅದೇನೇ ಇರಲಿ ಸದಾ ನಗುತಾ ಇರು ನೀನು.........
ನಿನ್ನ ಜೊತೆ ಮಾತನಾಡಿದರೆ
ಸವಿಜೇನು ಸವಿದಂತೆ ಆಗಲು ಕಾರಣವೇನು ?
ನಿನ್ನ ಜೀವನವು ಹಾಲುಜೇನಿನಂತೆ
ಸದಾ ಸಿಹಿಯಾಗಿರಲಿ ಎಂದು ಹರಸುವೆ .... ನಾನು
Monday, August 17, 2009
ಬೋರಿಂಗ್ ವೀಕೆಂಡು,ಬೋರಿಂಗ್ ದಿನ,ನಿದ್ದೆ ಮಾಡೋಕೆ ಬೋರು, ಟಿವಿ ನೋಡೋಕೆ ಬೋರು,ಊಟ ಮಾಡೋಕೆ ಬೋರು,ಹೊರಗೆ ಹೋಗೋಕೆ ಬೋರು..ಇಡೀ ದಿನ ಹಾಸಿಗೆ ಮೇಲೆ ಉರುಳಾಡುತ್ತ ನಿದ್ದೆನೂ ಮಾಡದೆ, ಸುಮ್ನೆ ಸತ್ತ ಹೆಣ(??)ದ ತರಹ ಬಿದ್ಕೊಂಡಿರೋದು..ಟಿವಿ. ಆನ್ ಆಗೇ ಇರುತ್ತೆ.ನೋಡೊರು ಯಾರೋ??!! ಎಲ್ಲಾ ಬೋರು ಮಯ..
ಮನಸೆಲ್ಲಾ ಖಾಲಿ ಖಾಲಿ..ಏನೋ ಅಪೂರ್ಣತೆ..ಕಾರಣವಿಲ್ಲದೆ ಹರಿಯುವ ಕಣ್ಣೀರ ಕೋಡಿ.ಬಿಡುವಿಲ್ಲದೆ ಬರುವ ಫೋನ್ ಕಾಲ್ ಗಳು..ಆ ಶಬ್ಧದ ಹಿಂಸೆ ತಾಳಲಾರದೆ ಸ್ವಿಚ್ ಆಫ್ ಇಲ್ಲಾ ಸೈಲೆಂಟ್ ಮೋಡ್ ಗೆ ಹಾಕಿ ಬಿಡೋದು.ಯಾಕೋ ಯಾವುದರಲ್ಲೂ ಆಸಕ್ತಿ ಇಲ್ಲ.ಏನಾಗಿದೆ ಅನ್ನೋ ಪ್ರಶ್ನೆಗೆ ಉತ್ತರ ಯಾರಿಗೂ ತಿಳಿತಿಲ್ಲ.
ಆ ಕಾಲ...............
ಊರಲ್ಲಿ ಇಡೀ ವಟಾರದವರು ಅವರವರ ಮಕ್ಕಳಿಗೆ , ನಮ್ಮನ್ನ ಉದಾಹರಿಸಿ, "ನೋಡು , ಮಕ್ಕಳು ಅಂದ್ರೆ ಹೀಗಿರಬೇಕು" ಅನ್ನೋ ದಿನಗಳು. ಯಾವ ಚಟುವಟಿಕೆಯಲ್ಲಿ ಇಲ್ಲ ಅನ್ನೋ ಪ್ರಶ್ನೆಗೆ ಉತ್ತರನೇ ಇರುತ್ತಾ ಇರಲಿಲ್ಲ.ಓದೋದು, ಕುಣಿಯೋದು,ಚಿತ್ರಕಲೆ, ಆಟೋಟ,ರೌಡಿಸಂ(??). ನಗುತ್ತಿರುವದು
ಎಲ್ಲದರಲ್ಲೂನೂ ಒಂದು ಹೆಜ್ಜೆ ಮುಂದೆನೇ. ಸಂತೋಶದಿಂದ ನಮ್ಮ ಮನಸ್ಸು ತುಂಬಿ ಹೋಗೋದು."ರೀ ಮುತ್ತಿನಂಥಾ ಮಕ್ಕಳನ್ನ ಪಡೆದಿದ್ದೀರ" ಅಂತ ಬೇರೆಯವರು ಹೇಳಿದಾಕ್ಷಣ ಹೆತ್ತವರ ಮುಖದಲ್ಲಿ ಸಾರ್ಥಕತೆಯ ಬಿಂಬ.
ಈಗ ಬ್ಯಾಕ್ ಟು ಪೆವಿಲಿಯನ್....
ದೊಡ್ಡ ಊರು, ದೊಡ್ಡ ಕೆಲಸ,ದೊಡ್ಡ ಸಂಬಳ,ದೊಡ್ಡ ಜನ..ಎಲ್ಲಾನೂ ಅಂದುಕೊಂಡ ತರನೇ ಆಗಿದೆ.ಕಷ್ಟ ಪಟ್ಟು ಓದುತ್ತಾ ಇರಬೇಕಾದ್ರೆ ಕಂಡ ಕನಸುಗಳು ನಿಜವಾಗಿವೆ.ಪ್ರತಿಷ್ಟಿತ ಕಂಪನಿಯಲ್ಲಿ ಉದ್ಯೋಗ..ಒಳ್ಳೆ ರೆಪ್ಯುಟೇಶನ್.ಇನ್ನೇನು ಬೇಕು ಈ ಸಣ್ಣ ಜೀವಕ್ಕೆ?? ಆದರೆ ಬಾವಿಯಲ್ಲಿದ್ದ ಕಪ್ಪೆ ಸಮುದ್ರಕ್ಕೆ ಬಿದ್ದಾಗ ಏನಾಯ್ತು ಅದರ ಕಥೆ?
ನಾವುಗಳು ಕಾಣೋ ಕನಸನ್ನ ನನಸು ಮಾಡೋ ಪ್ರಯತ್ನದಲ್ಲಿ ನಮ್ಮ ತನವನ್ನ ನಾವು ಕಳ್ಕೋತಿವಿನೋ ಅನಿಸ್ತಾ ಇದೆ. ಏನನ್ನೂ ಸಾಧಿಸಲಾಗದ ವಿಪರ್ಯಾಸ.ಯಾರದ್ದೋ ಮುಷ್ಟಿಯಲ್ಲಿ ಬಂಧಿತರಾಗಿರುವಂತೆ ಸಾಗಿಸುವ ಜೀವನ. ಹೇಗೇಗೋ ಇದ್ದೋರು, ಹೇಗೋ ಆಗಿಬಿಡ್ತೀವಿ.ಈ ಓಟ ಎಷ್ಟು ದಿನ?ಎಲ್ಲರನ್ನೂ ಕಾಡುವ ಖಾಲಿತನ, ಅಪೂರ್ಣತೆಗೆ ಪೂರ್ಣ ವಿರಾಮ ಎಂದಿಗೆ?ಉತ್ತರ ನಮ್ಮಲ್ಲೇ ಇದೆ,ಕಾಲಕ್ಕೆ ತಕ್ಕಂತೆ ನಮ್ಮ ಜೀವನ ಅನ್ನುವವರು ಎಷ್ಟೋ ಮಂದಿ.ಆದರೆ ಅದನ್ನ ಕಾರ್ಯ ರೂಪಕ್ಕೆ ತಂದಿರೋರು ಎಷ್ಟು ಜನ? ಎಲ್ಲರೂ ನೆಮ್ಮದಿ , ಶಾಂತಿಯುತವಾದ ಜೀವನ ನಡೆಸೋಕ್ಕೆ ಇನ್ನೆಷ್ಟು ಸಹಸ್ರ ವರ್ಷಗಳು ಕಾಯಬೇಕೇನೋ!!!!!!
Wednesday, August 12, 2009
ನನ್ನ ಗೆಳತಿಗಾಗಿ...................
ಈ ಸ್ನೇಹದ ಕಾಣಿಕೆಯು ನೀನು
ನಿನ್ನ ನೆನಪಿನಲ್ಲಿ ಇರುವ
ಆ ಮಾಯೆಯಾದರು ಏನು ?
ನಿನ್ನ ನೆನೆದರೆ ಆಗುವ
ಈ ಮನಸ್ಸಿನ ಆನಂದದ ಕಾರಣವೇನು ?
ವರುಷಗಳೇ ಕಳೆದು ಹೋದರು
ನಿನ್ನ ನೆನಪಲ್ಲಿರುವ ಆ ಹರುಷಕ್ಕೆ ಕಾರಣವೇನು ?
ನಿನ್ನ ಒಮ್ಮೆಯಾದರು ನೋಡದಿದ್ದರೂ
ನನ್ನ ಮನಸ್ಸಲ್ಲಿ ನಿನ್ನ ನೋಡಲು ಕಾರಣವೇನು ?
ಓ ನನ್ನ ಗೆಳತಿ
ಈ ಸ್ನೇಹಕ್ಕೆ ಇಸ್ಟೊಂದು ಶಕ್ತಿ ಇರಲು ಕಾರಣವೇನು ?
ಅದೇನೇ ಇರಲಿ ಸದಾ ನಗುತಾ ಇರು ನೀನು.......
ಈ ಸ್ನೇಹಕೆ ನಿಜವಾಗಲೂ ಇಷ್ಟು ಶಕ್ತಿ ಇದ್ದರೆ
ನಿನ್ನ ಕಾಣುವ ಆ ದಿನವು ಎಂದು ಎಲ್ಲಿ ಹೇಗೆ ?
ನನ್ನ ಮನಸ್ಸಲ್ಲಿರುವ ಈ ಪ್ರಶ್ನೆಗಳಿಗೆ ಉತ್ತರವೇನು ?
ಓ ನನ್ನ ಸಕಿಯೇ
ಈ ಸ್ನೇಹದ ಕಾಣಿಕೆಯು ನೀನು
ನಿನ್ನ ನೆನಪಿನಲ್ಲಿ ಇರುವ
ಆ ಮಾಯೆಯಾದರು ಏನು ?
ಈ ಮನಸ್ಸಿನ ಆನಂದದ ಕಾರಣವೇನು ?
ನನ್ನ ಮನಸ್ಸಲ್ಲಿರುವ ಈ ಪ್ರಶ್ನೆಗಳಿಗೆ ಉತ್ತರವೇನು ?
ಅದೇನೇ ಇರಲಿ ಸದಾ ನಗುತಾ ಇರು ನೀನು.........
ನಿನ್ನ ಜೊತೆ ಮಾತನಾಡಿದರೆ
ಸವಿಜೇನು ಸವಿದಂತೆ ಆಗಲು ಕಾರಣವೇನು ?
ನಿನ್ನ ಜೀವನವು ಹಾಲುಜೇನಿನಂತೆ
ಸದಾ ಸಿಹಿಯಾಗಿರಲಿ ಎಂದು ಹರಸುವೆ .... ನಾನು.......................
Tuesday, May 26, 2009
"ಕಾಲೇಜ್ ಬಳಿ ಇರೋ ಮೈದಾನಕ್ಕೆ ಬಾ. ಸ್ವಲ್ಪ ಮಾತಾಡೋದಿದೆ."
ನಾನು ಫೋನ್ ಹಿಡಿದುಕೊಂಡೇ ಕಿಟಕಿಯಿಂದ ಹೊರಗಿಣುಕಿ "ಮಳೆ ಬರೊ ಹಾಗಿದೆಯಲ್ಲೇ, ಸಂಜೆ ಸಿಕ್ಕಿದ್ರೆ ಆಗಲ್ವ" ಎಂದೆ.
"ಇಲ್ಲ, ಸ್ವಲ್ಪ ಅರ್ಜೇ೦ಟು, ಈಗಲೇ ಬಾ" ಎಂದಳು.
ಅವಳ ಮಾತುಗಳು ಎಂದಿನ ಹಾಗಿರಲಿಲ್ಲ. ಯಾವಾಗಲೂ ಮಾತಿನ ಕೊನೆಗೆ ಸೇರಿಸುತ್ತಿದ್ದ "ಕಣೊ" "ಬಾರೋ" "ಹೇಳೊ" ಗಳು ಇಂದು ಮಾಯವಾಗಿದ್ದನ್ನು ನಾನು ಗಮನಿಸದೆ ಇರಲಿಲ್ಲ. ಆದರೂ ಅವಳು ಕೆಲವೊಮ್ಮೆ ಚಿಕ್ಕ ವಿಷಯವನ್ನೂ ಗಂಭೀರವಾಗಿಸಿಕೊಂಡು ಹೀಗೆ ಮಾತಾಡುವುದು ಇದ್ದೇ ಇದೆ.
ನಾನು ಅಂಗಳಕ್ಕೆ ಹೋಗಿ ಇನ್ನೊಮ್ಮೆ ಆಗಸದತ್ತ ದೃಷ್ಟಿಸಿದೆ. ಇಂದು ಮತ್ತೆ ಮಳೆ ಬರುವುದು ಗ್ಯಾರೆಂಟಿ ಎಂದೆಣಿಸಿ ಉಲ್ಲಸಿತನಾದೆ. ಈಗ ಮೊರ್ನಾಲ್ಕು ದಿನಗಳಿಂದ ಸಂಜೆ ಮಳೆ ಬೀಳುತ್ತಿತ್ತು. ಅದೂ "ಹಳೆಮಳೆ" ಅಂದ್ರೆ ನನಗೆ ಇನ್ನೂ ಸಂತೋಷ. "ಭಾನುವಾರನೂ ಬಿಡೋದಿಲ್ಲ ಈ ಮಳೆ" ಅಂತ ಅಮ್ಮ ಬರಲಿರುವ ವರುಣನನ್ನು ಶಪಿಸಿದಳು. ಶಾರದಾಂಬ ದೇವಸ್ಥಾನದ ಭಜನೆ ಎಲ್ಲಿ ತಪ್ಪಿ ಹೋಗುವುದೋ ಎಂದು ಅಮ್ಮನಿಗೆ ಆತಂಕವಾಗಿತ್ತು. ಸರಸರನೆ ಪ್ಯಾಂಟ್ ಏರಿಸುತ್ತಿದ್ದ ನನ್ನನ್ನು ನೋಡಿದ ಅಮ್ಮ "ಈಗ ಎಲ್ಲಿಗೋ? ಆಕಾಶ ನೋಡು ಸಗಣಿ ಬಳಿದಂತೆ ಕಪ್ಪಾಗಿದೆ, ಮಳೆ ಬರುತ್ತೆ. ಎಲ್ಲಿಗೂ ಹೋಗಬೇಡ" ಅಂದರು. ಅಮ್ಮನಿಗೆ ಮಳೆಯ ಮೇಲಿನ ಹುಸಿ ಕೋಪ ಅವಳ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. "ಫ್ರೆಂಡ್ ಮನೆಗೆ, ಸ್ವಲ್ಪ ಹೊತ್ತಿನಲ್ಲೇ ಬಂದು ಬಿಡುತ್ತೇನೆ " ಎಂದು ಹೇಳಿ ಅಮ್ಮನ ಪ್ರತಿಕ್ರಿಯೆಗೂ ಕಾಯದೆ ಮನೆಯಿಂದ ಹೊರಬಿದ್ದೆ.
ಗಾಳಿ ಜೋರಾಗಿ ಬೀಸುತ್ತಲಿತ್ತು. ಗಾಳಿಯ ವೇಗಕ್ಕೆ ರಸ್ತೆಯ ಕಸ, ಧೂಳೆಲ್ಲ ಮಿಶ್ರಗೊಂಡು ಆಕಾಶದಲ್ಲಿ ಹಾರಾಡುತ್ತಿದ್ದವು. ಜನರೆಲ್ಲ ಮನೆ ಸೇರಿಕೊಳ್ಳುವ ತವಕದಲ್ಲಿದ್ದರು. "ಛೆ, ಇವತ್ತು ತಲೆ ಸ್ನಾನ ಮಾಡಿದ್ದೆ ದಂಡ" ಎಂದು ನನ್ನಷ್ಟಕ್ಕೆ ಅಂದುಕೊಂಡೆ. ಮಳೆ ಬರೋದ್ರೊಳಗೆ ಕಾಲೇಜ್ ತಲುಪಬೇಕೆಂದು ವೇಗವಾಗಿ ಹೆಜ್ಜೆ ಹಾಕತೊಡಗಿದೆ. ಹೆಚ್ಚೂ ಕಡಿಮೆ ಓಡಿದಂತೆ ನಡೆದು ಮೈದಾನಕ್ಕೆ ಹತ್ತಿರಗೊಂಡೆ. ಮೈದಾನದ ಇನ್ನೊಂದು ತುದಿಯಲ್ಲಿ ಭೂತಾಕಾರವಾಗಿ ಬೆಳೆದಿದ್ದ ಸಂಪಿಗೆ ಮರದ ಬುಡದಲ್ಲಿ ಅವಳು ನಿಂತಿದ್ದಳು. ಸಂಪಿಗೆ ಮರ ಗಾಳಿಗೆ ತೂರಾಡುತ್ತ ಇನ್ನಷ್ಟು ಭಯಾನಕವಾಗಿ ತೋರುತ್ತಿತ್ತು. ಇವಳಿಗೆ ಅರ್ಥನೇ ಆಗಲ್ಲ, ಗಾಳಿ ಈ ರೀತಿ ಬೀಸುತ್ತಿದೆ, ಮರದ ಕೆಳಗೆ ನಿಂತಿದ್ದಾಳೆ ಎಂದು ಗದರಿಸಲು ಸಜ್ಜಾಗುತ್ತಾ ಅವಳತ್ತ ಧಾವಿಸಿದೆ. "ಏನೇ ಇಷ್ಟೊತ್ತಲ್ಲಿ ಬರ ಹೇಳಿದೆ, ಅದೂ ಅರ್ಜೆ೦ಟ್ ಅಂಥ" ಎಂದಿನಂತೆ ಮಾತಾಡಿದೆ. ಉತ್ತರ ಬರಲಿಲ್ಲ. ಅವಳು ನೆಲವನ್ನೆ ದಿಟ್ಟಿಸುತ್ತಿದ್ದಳು. ಏನೋ ಹೇಳೊಕೆ ಹೊರಟವನು ಸಂಪಿಗೆ ಮರದ ಹೊಯ್ದಾಟದಿಂದ ಭಯಗೊಂಡು "ನಡಿ ಇಲ್ಲಿ ನಿಲ್ಲುವುದು ಬೇಡ, ಕಾಲೇಜ್ ಬಳಿ ಹೋಗೋಣ" ಎಂದೆ. ನಾವು ಮರೆಯಿಂದ ಹೊರ ಬಂದಿದ್ದೇ ತಡ, ನೆಲ್ಲಿಕಾಯಿ ಗಾತ್ರದ ಮಳೆ ಹನಿಗಳು ಒಂದೊಂದಾಗೆ ಭೂಮಿಯ ಕಡೆಗೆ ಶರವೇಗದಲ್ಲಿ ಬೀಳತೊಡಗಿದವು. "ಓಡು ಓಡು, ಈ ಮಳೆಗೆ ತಲೆ ಕೊಟ್ರೆ ತಲೇನೆ ತೂತಾಗೋ ಚಾನ್ಸ್ ಇದೆ" ಎನ್ನುತ್ತ ಕಾಲೇಜ್ ಕಡೆಗೆ ಓಡತೊಡಗಿದೆ. ಅವಳು ದುಪಟ್ಟ ತಲೆಗೇರಿಸಿಕೊಂಡು ನನ್ನನ್ನು ಹಿಂಬಾಲಿಸತೊಡಗಿದಳು. ಹಂಚಿನ ಮಾಡಿಯ ಮೇಲೆ ಬೀಳುತ್ತಿದ್ದ ಮಳೆ ಹನಿಗಳ ಶಬ್ದ ಕಲ್ಲುಗಳು ಬಿದ್ದಂತೆ ಭಾಸವಾಗುತ್ತಿತ್ತು.
"ಏನೊ ಹೇಳ್ಬೇಕು ಅಂದ್ಯಲ್ಲ, ಈಗ ಹೇಳು, ಏನಂಥ ಸೀರಿಯಸ್ ವಿಷಯ ?"
"........................................."
"ಏನು ಹೇಳ್ತಿಯೊ ಇಲ್ವೊ? "
"........................................ ಏನೂ ಇಲ್ಲ."
"ಅರೆ ಇದೊಳ್ಳೆ ಕಥೆ ಆಯ್ತಲ್ಲ. ಏನೂ ಇಲ್ದೆ ಮತ್ತೇಕೆ ಕರೆದೆ. ಅಕ್ಷಯ್ ಕುಮಾರ್-ರವೀನಾ ತರ ಮಳೇಲಿ ಡ್ಯೂಯೆಟ್ ಹಾಡ್ಬೇಕು ಅನ್ನಿಸ್ತೇನೆ?" ಅಣಕವಾಡಿದೆ.
ಮಳೆ ಜೋರಾಯಿತು. ಮೈದಾನದಲ್ಲೆಲ್ಲ ತಿಳಿ ಬಿಳಿಯ ಪರದೆಯನ್ನು ಬಿಟ್ಟಂತೆ ಕಂಡುಬಂತು. ನನ್ನ ಮೆಚ್ಚಿನ ಮಳೆಯನ್ನು ನೋಡುತ್ತ ಕ್ಷಣಾರ್ಧದಲ್ಲೆ ಜಗವನ್ನು ಮರೆತು ಮಳೆಯ ಪ್ರಲಾಪದಲ್ಲಿ ಲೀನಗೊಂಡೆ. ಮಳೆ ಒಂದೇ ಸಮನೆ ಹೆಚ್ಚಾಗತೊಡಗಿತು. ಗಾಳಿ ಮೊದಲಿನಷ್ಟು ಇರಲಿಲ್ಲ. ನೋಡನೋಡುತ್ತಿದ್ದಂತೆ ಚರಂಡಿಗಳೆಲ್ಲ ಕೆಂಪು ಮಿಶ್ರಿತ ನೀರಿನಿಂದ ತುಂಬಿ ಹೋದವು. ಮಳೆಯ ರೌದ್ರತೆಗೆ ನನ್ನನ್ನು ನಾನೆ ಕಳೆದುಕೊಂಡೆ. ಐದಾರು ನಿಮಿಷಗಳೆ ಕಳೆದಿರಬೇಕು.
"ಇಲ್ಲಿ ಕೇಳು...................................." ನಾನು ಮಳೆಯ ಮೋಡಿಯಿಂದ ಹೊರಬಂದೆ.
"ಕರೆದ್ಯಾ?........... ಏನೋ ಹೇಳ್ಬೇಕು ಅಂದೆ....." ಅವಳನ್ನು ನೆನಪಿಸಿದೆ.
"......................................." ಅವಳ ಮೌನ ಮತ್ತೆ ಮಳೆಯೆಡೆಗೆ ಗಮನ ಹರಿಸಲು ಅವಕಾಶ ಮಾಡಿಕೊಟ್ಟಿತು.
"ನನ್ನನ್ನು ಮರೆತುಬಿಡು......"
"ಏನು!!!!!.........." ಭ್ರಮಾಲೋಕದಿಂದ ಎಚ್ಚೆತ್ತವನಂತೆ ಪ್ರಶ್ನಿಸಿದೆ.
"ನನ್ನ ಬಳಿ ಸಮಯವಿಲ್ಲ. ಮನೇಲಿ ಸುಳ್ಳು ಹೇಳಿ ಬಂದಿದೀನಿ, ನನ್ನನ್ನು ಮರೆತುಬಿಡು. ನಮ್ಮ ಸಂಭಂದ ಇಲ್ಲಿಗೆ ನಿಲ್ಲಿಸೋಣ" ಅಳತೊಡಗಿದಳು.
"ಏನ್ ತಮಾಷೆ ಮಾಡ್ತೀಯಾ? " ಆತಂಕಗೊಂಡಿದ್ದೆ.
"..........................." ಮತ್ತೆ ಮೌನ. ಕಣ್ಣೀರು ಅವಳ ಕಪಾಲಗಳನ್ನು ತೋಯಿಸಿದ್ದವು.
"......... ಇನ್ನೆರಡು ದಿನಗಳಲ್ಲಿ ನನ್ನ ನಿಶ್ಚಿತಾರ್ಥ. ನನ್ನ ಮನೆಯವರನ್ನು ಎರುರಿಸಲು ನನ್ನಿಂದಾಗಲಿಲ್ಲ. ಕ್ಷಮಿಸಿಬಿಡು" ಬಿಕ್ಕತೊಡಗಿದಳು.
ನನಗೆ ಮಾತೇ ಹೊರಡಲಿಲ್ಲ. ತಲೆ ಸುತ್ತುವಂತೆನಿಸಿ ಗೋಡೆಯನ್ನು ಹಿಡಿದು ಕೂರಲೆತ್ನಿಸಿದೆ. ನನ್ನ ಪರಿಸ್ಥಿತಿಯನ್ನರಿತ ಅವಳು ಹತ್ತಿರ ಬಂದು ಕೈ ಹಿಡಿದುಕೊಂಡಳು.
"ಯಾಕೇ ಹೀಗ್ ಮಾಡ್ದೆ......" ತಡೆಯಲಾರದೆ ಕಣ್ಣೀರು ಜಿನುಗಿತು.
"ಕ್ಷಮಿಸಿಬಿಡೋ................." ಅಪರಾಧಿ ಮನೋಭಾವ ಅವಳಲ್ಲಿತ್ತು.
ನನ್ನ ಕಣ್ಣೀರು ಒರೆಸಿ, ತಾನೂ ಕಣ್ಣೀರು ಒರೆಸಿಕೊಂಡು "ನನಗಿಂತ ಒಳ್ಳೇ ಹುಡುಗಿ ಸಿಕ್ತಾಳೆ ಬಿಡು" ಎಂದು ಸಾಂತ್ವಾನಿಸಿದಳು.
ಸನಿಹ ಬಂದು ಹಣೆಯನ್ನೊಮ್ಮೆ ಚುಂಬಿಸಿ "ಈ ಪಾಪಿನ ಯಾವತ್ತೂ ನೆನಪಿಸಿಕೊಳ್ಳಬೇಡ" ಎಂದು ಹೇಳಿ ಛತ್ರಿ ಬಿಡಿಸಿ ಓಡತೊಡಗಿದಳು. ಮಳೆಗೆ ಇದಾವುದರ ಪರಿವೆಯೇ ಇರಲ್ಲಿಲ್ಲ. ಇಂತಹ ಎಷ್ಟು ಅಂತ್ಯಗಳನ್ನು ಕಂಡಿತ್ತೋ ಈ ಮಳೆ.
ಬಯಲು ದಾಟಿ ಮನೆ ಹಾದಿ ಹಿಡಿದಾಗ ಮಳೆ ತೃಪ್ತಿಗೊಂಡು ನಿಲ್ಲತೊಡಗಿತು. ಒಂದೂವರೆ ವರ್ಷದಿಂದ ಪ್ರೀತಿಯ ಮಳೆಗೈದು ಬೆಳೆಸಿದ್ದ ಸಂಭಂದವನ್ನು ಕೇವಲ ಹತ್ತು ಮಾತಾಡಿ, ನಿಮಿಷಗಳಲ್ಲೇ ಮರೆಯುವುದು, ಭಾವನೆಗಳನ್ನು ಬಟ್ಟೆ ಬದಲಿಸಿದಂತೆ ಬದಲಿಸುವುದು ಸಾಧ್ಯವೇ ಎನ್ನಿಸಿತು. ಕರ್ಚೀಫಿನಿಂದ ಹಿಡಿದು ಪೆನ್ನು, ಪುಸ್ತಕ, ತಿಂಡಿ, ಮನಸ್ಸು, ಭಾವನೆ, ಕನಸುಗಳವರೆಗೆ ಎಲ್ಲವನ್ನೂ ಹಂಚಿಕೊಂಡಿದ್ದ ನಾವು ಇನ್ನು ಮುಂದೆ ಯಾವುದೇ ಸಂಭಂದವಿಲ್ಲದೆ ಬಾಳುವುದನ್ನು ನನಗೆ ಚಿತ್ರಿಸಿಕೊಳ್ಳಲ್ಲೂ ಆಗಲಿಲ್ಲ. ಅವಳಲ್ಲಿ ಈ ಎಲ್ಲಾ ಪ್ರಶ್ನೆಗಳನ್ನೊ ಕೇಳಬೇಕೆಂದೆನಿಸಿ ಕರೆ ಮಾಡಿದೆ. ಆ ಕಡೆಯಿಂದ ಉತ್ತರ ಬರಲಿಲ್ಲ. ಅವಳೂ ಇಂಥದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದಳೇನೊ. ಕೊನೆಗೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ದಿನಕಳೆದ ಹಾಗೆ ಎಲ್ಲವೂ ಭೂತಕಾಲವನ್ನು ಹೊಕ್ಕವು. ಕೆಲವೊಮ್ಮೆ ಇಷ್ಟು ಸುಲುಭವಾಗಿ ಸೋತೆನಲ್ಲ ಎಂದೆನಿಸುತ್ತದೆ. ನಿಜವಾಗಲೂ ಯಾವುದು ಸೋಲು, ಯಾವುದು ಗೆಲುವು ಅನ್ನೊದೆ ಗೊತ್ತಾಗದ ಸ್ಥಿತಿ ತಲುಪಿದ್ದೇನೆ.
ಮಳೆ ನೋಡುತ್ತ ಕಿಟಕಿಯ ಮುಂದೆ ನಿಂತಿದ್ದ ನನಗೆ ಮಳೆ ನಿಂತಿದ್ದು ಅರಿವಿಗೇ ಬರಲಿಲ್ಲ. ಮಳೆ ನಿಂತಿದೆ. ಆದರೆ ನೆಲವೆಲ್ಲಾ ಕೆಸರಾಗಿದೆ. ನನ್ನ ಮನಸೂ ಕೂಡ. ಕೆಸರು ಒಣಗಿ ಗಟ್ಟಿಯಾಗಲು ಇನ್ನೂ ಎರಡು ದಿನಗಳಾದರೂ ಬೇಕು, ಅದೂ ಮತ್ತೊಮ್ಮೆ ಮಳೆ ಬಾರದಿದ್ದರೆ.
( ಇದು ನನ್ನ ಅನುಭವ ಅಲ್ಲ ............................. ಇ ರೀತಿ ಯಾರಿಗೂ ಆಗುವುದು ಬೇಡ .......................)
Tuesday, April 28, 2009
ಸ್ವರಚಿತ ಕವನಗಳು
ಬಾಳಲ್ಲಿ ಇರಬೇಕು ಸ್ವಲ್ಪ ಹುಡುಗಾಟ,
ಇಲ್ಲವಾದರೆ ಬಾಳಿನ ನೆಮ್ಮದಿ ಗಾಗಿ ದಿನವು ಮಾಡಬೇಕು
........................... ಹುಡುಕಾಟ
೨೦ ೨೦ ಕ್ರಿಕೆಟ್
ಇದೋ ಬಂದಿದೆ IPL ಆಟ
batsman ಗಳ ಹೊಡೆದಾಟ
bowler ಗಳ ಪರದಾಟ
chears ಹುಡುಗಿರ ಕುಣಿದಾಟ
BCCI ಗೆ ಹಣದ ಹರಿದಾಟ
ಕೇಳುವವರಿಲ್ಲ ಸೋತ ತಂಡಗಳ ಮಾಲೀಕರ ಗೋಳಾಟ ............................
ದೋಸ್ತ್ ......
ಜೀವನ ಎಂಬ ಕ್ಯಾಮೆರಾದಲ್ಲಿ,
ಮನಸು ಎಂಬ ರೀಲು ಹಾಕಿ,
ಸ್ನೇಹ ಎಂಬ ಬಟನ್ ಒತ್ತಿದಾಗ,
ಈ ನನ್ನ ಹೃದಯದಲ್ಲಿ ಮೂಡುವುದೆ ನಿಮ್ಮ ಭಾವಚಿತ್ರ. !!!
ಜಗವೆಲ್ಲ ಮಲಗಿರಲು........
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ....ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ............
ಯಾಕಂದ್ರೆ ಅವನು ಕಾಲ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ.......
Monday, April 20, 2009
Thursday, April 16, 2009
ಇನ್ನೊಂದು ಇಷ್ಟು ಕವನಗಳು ...........
. ಪ್ರೇಮಗೀತೆ .
ನಿನಗಾಗಿ
ನ ಬರೆದೆ ಪ್ರೇಮಗೀತೆ
ಆದರೆ...
ಅದು ನಿನಗೆ ತಿಳಿಯದಾಗಿ
ನ ಕಳೆದೆ ಜೀವನವನ್ನು
ಕೇಳುತ್ತಾ ವಿರಹಗೀತೆ...
ಪ್ರೀತಿ ಅಂದ್ರೆ ಇದೇನಾ?
ಯಾವ ಹುಡುಗಿನಾ ನೋಡಿದ್ರೂ ನೀನೆ ಅನ್ನಿಸೋ ಭಾವನೆ,
ಎದುರಿಗೆ ಬಂದರೆ, ಎದೆ ಝಲ್ ಅನ್ನೋ ಕಸಿವಿಸಿ..
ಮಿಲನ ಆ ಮಿಲನ, ನಿನ್ನ ಕಣ್ಣಿನ ಆ ಮಿಲನ
ಹೊಡೆಯಿತು ಎನ್ನದೆಗೆ ಬಾಣ
ಚೂರಾಯಿತು ಈ ಪ್ರಾಣ
ನಿಜವೋ ಆ ನೋಟ ಮಜವೋ
ತಿಳಿಯದಾದೆನು ನಾನಂದು
ಒಲವ ತೋರಬಾರದ ನೀನಿಂದು
ನನ ಕಲ್ಲಿನ ಆ ಹೃದಯ
ಕಂಪಿಸಿದೆ ಇಂದು
ನಿನ ಒಲವಲಿ ತಾ ಮಿಂದು
ಹಾಡಿದೆ ಈ ಕವನ
ನನ್ನ ತನು ಮನದ ನೀರೆ
ದಯೆ ತೋರುತ ನೀ ಬಾರೆ
ಚಳಿಯಲ್ಲಿ....
ಹೊರಗೆ ಮಳೆಯಿರಲಿ , ಚಳಿಯಿರಲಿ...
ನನಗೆ ಬೇಕಾಗುವುದಿಲ್ಲ ಹೊದಿಕೆ...
ಯಾಕೆಂದರೆ.......................
ಒಳಗೆ ನನ್ನವಳು
ಪಕ್ಕದಲ್ಲಿ ತಬ್ಬಿ ಮಲಗಿರುವಾಗ...
ನನಗೆ ಯಾವಾಗಲೂ ಸೆಕೆ....
ಗೆಳತಿ...
ನಾನು SMS ಕಳುಹಿಸಿ ಕಳುಹಿಸಿ ಸೋತೆ...
ನೀನು SMS ಕಳುಹಿಸದೆ ಸೋತೆ'ಯ?..
ತುಂಡಾಗಬಹುದು ನಮ್ಮೀ ಸ್ನೇಹದ ಸೇತುವೆ..
ಹರಿಯಿಯಬಹುದು ಕಣ್ಣೀರಿನ ಕಾಲುವೆ....(?)
ನೆನಪು ~~
ನನ್ನ ಬಾಳ ಬೆಳಗುವ
ಬೆಳಕಾಗುವೆಯೆಂದೆ...
ನನ್ನ ಜೀವನದ
ನೆರಳಾಗಿ ಬರುವೆಯೆಂದೆ...
ಆದರೆ..................
ನೆನಪಾಗಿಯೆ ಉಳಿದೆ.....(~_~)
ನೀ ಲ್ಯಾಪ್ ಟಾಪ್ ಆದರೆ
ನಾ ಕಂಪ್ಯೂಟರ್
ನೀ ಡಿ ವಿ ಡಿ ಯಾದರೆ
ನಾ ಆಡಿಯೊ ಕ್ಯಾಸೆಟ್
ನೀ ಲಾಸ್ ವೇಗಸ್ ಆದರೆ
ನಾ ಬಾಂಬೆ ಸಿಟಿ
ನೀ ಹುಣ್ಣಿಮೆಯ ಚಂದಿರ ವಾದರೆ
ನಾ ಅಮವಾಸ್ಯೆಯ ರಾತ್ರಿ...
ಗೆಳತಿ
ನೀ ಹೂ ವಾದರೆ..
ನಾ ದುಂಬಿಯಾಗುವೆ
ನೀ ದುಂಬಿಯಾದರೆ..
- ವಿಮೆ-
ಗೆಳತಿ ನಾ ನಿನ್ನ
ಹಗಲಿರುಳು ಪ್ರೀತಿಸಿ ಕೊನೆಗೂ ಸೋತೆ
ಆದರೆ...
ನಾ ನಿನ್ನ ಪ್ರೀತಿಗಾಗಿ
ಮಾಡಿಸಿದ್ದರೆ ವಿಮೆ
ವಿಮೆಯ ಹಣದಿಂದ
ಗೆಲ್ಲುತಿರಬಹುದಿತ್ತು....(?)
ಕವನಾ ಮೂಡುವುದು (Muduvudu)
ಕಲ್ಪನೆಯಲ್ಲಾ ಅಥವಾ ಕನಸಲ್ಲಾ ??????????
ಕವನಾ ಮೂಡುವುದು(Muduvudu)
ಕಣ್ಣುಗಳು ಕಲ್ಪನೆಯಲ್ಲಿ ಕಲೆತಾಗ ,,,,,,,,,,,,,,,
ಕವಿ ನಿಸರ್ಗದಲ್ಲಿ ಬೆರೆತಾಗ ,,,,,,,,,,,,,,,,,,,
ಮನಸ್ಸನ್ನು ಕನಸು ಕವಿದಾಗ ,,,,,,,,,,,,,,,
ರಸ ನಿಮಿಷಗಳ ಸವಿದಾಗ ,,,,,,,,,,,,,,,,,,
ಕೆರೆ ನೀರಿಗೆ ಸುಳಿಗಾಳಿ ಸ್ವರ್ಶಿಸಿದಂತೆ,
ಅವಳ ಕಳೆಮೊಗದಲ್ಲಿ ಎಳೆನಗುವೊಂದು ಮಿಂಚುತಿತ್ತು.
ಮಿಂಚಿಗೆ ನಾನು ಕರಗಿ, ಮಳೆಯಾಗಿ ನೀರಾಗಿ ಹರಿದುಹೋಗುತ್ತಿದ್ದೆ.
ಸೇರುವುದೆಲ್ಲಿಗೋ ಅರಿಯೇ ಆದರೂ ಹರಿಯಬೇಕಿತ್ತು
ಹರಿಯುತ್ತಿದ್ದೆ ಅಷ್ಟೆ.

